
ಕಾರ್ಕಳ, ಫೆ,27: ಶಾಲೆ ಮುಗಿಸಿ ತನ್ನ ಪಾಡಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಮನೆಗೆ ಬಿಡುವುದಾಗಿ ಹೇಳಿ ತನ್ನ ರಿಕ್ಷಾ ಹತ್ತಿಕೊಂಡ ಕಾಮುಕ ರಿಕ್ಷಾ ಚಾಲಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೋಳ ಎಂಬಲ್ಲಿ ನಡೆದಿದೆ.
ರಿಕ್ಷಾ ಚಾಲಕ ಅಮರನಾಥ ಪೂಜಾರಿ(31) ಎಂಬಾತ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ. ಕಾಮುಕ ಅಮರನಾಥ ಪೂಜಾರಿ ಮಂಜರಪಲ್ಕೆಯ ಬಳಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯ ಬಟ್ಟೆ ಹರಿದು ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ಜೋರಾಗಿ ಕಿರುಚಿಕೊಂಡು ಓಡಿ ತಪ್ಪಿಸಿಕೊಂಡಿದ್ದಾಳೆ. ಬಳಿಕ ಪೋಷಕರು ನೀಡಿದ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


.
.
.
.
.
.
.
.
.
.
