
ಕಾರ್ಕಳ,ಜ.10; ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಹೆಬ್ರಿಯ ಸಚಿನ್ ಶೆಟ್ಟಿ ಅವರು ಎನ್ ಎಸ್ ಜಿ ಕಮಾಂಡೋ ಆಗಿ ನೇಮಕಗೊಂಡಿದ್ದಾರೆ.
ಹೆಬ್ರಿಯ ದಿ. ಜಗದೀಶ್ ಮತ್ತು ಸತ್ಯವತಿ ಶೆಟ್ಟಿ ದಂಪತಿಯ ಪುತ್ರರಾಗಿರುವ ಸಚಿನ್ ಶೆಟ್ಟಿ ಅವರು 2012ರಲ್ಲಿ ಸೇನೆಗೆ ಸೇರ್ಪಡೆಗೊಂಡರು. 1 ವರ್ಷ ಮಧ್ಯಪ್ರದೇಶ ಜಬಲ್ಪುರ್‌ನಲ್ಲಿ ತರಬೇತಿ ಪಡೆದು ಬಳಿಕ ರಾಜಸ್ಥಾನ್, ಜಮ್ಮು ಕಾಶ್ಮೀರ, ಪಂಜಾಬ್ ಹಾಗೂ ಜಮ್ಮು ರಾಷ್ಟ್ರೀಯ ರೈಫೆಟ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.ಇದೀಗ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್.ಎಸ್.ಜಿ) ಕಮಾಂಡೋ ತರಬೇತಿ ಮುಗಿಸಿ ದೆಹಲಿಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದಾರೆ.

.
.
