

ಕಾರ್ಕಳ,ಆ.29: ಅಜೆಕಾರು ಆಟೋ ರಿಕ್ಷಾ ಚಾಲಕ ಮಾಲಕ ಸಂಘ ಹಾಗೂ ಸಾರಥಿ ಫ್ರೆಂಡ್ಸ್ ಸಹಯೋಗದಲ್ಲಿ ಬಡ ರೋಗಿಗಳ ನೆರವಿಗೆ ನೂತನ ಯೋಜನೆ ಸಾರಥಿ ಆಂಬುಲೆನ್ಸ್ ಇದರ ಲೋಕಾರ್ಪಣೆ ಕಾರ್ಯಕ್ರಮ ಆ.30ರಂದು ಬೆಳಗ್ಗೆ10 ಗಂಟೆಗೆ ಅಜೆಕಾರು ಬಸ್ ಸ್ಟ್ಯಾಂಡ್ ವಠಾರದಲ್ಲಿ ನಡೆಯಲಿದೆ.
ರಿಕ್ಷಾ ಚಾಲಕ ಮಾಲಕ ಸಂಘಟನೆಯ ಕೆಲವು ಸಮಾನ ಮನಸ್ಕ ಸದಸ್ಯರು ಒಗ್ಗೂಡಿ ಅನಾರೋಗ್ಯದಿಂದ ಬಳಲುತ್ತಿರುವ ನೂರಾರು ರೋಗಿಗಳ ನೆರವಿಗಾಗಿ ಬ್ಯಾಂಕಿನಿಂದ ಸಾಲ ಪಡೆದು ಜನ ಸೇವೆ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ.
ಜನ ಸೇವೆಯ ಉದ್ದೇಶದಿಂದ ಆರಂಭಿಸಲಾಗಿರುವ ಆಂಬುಲೆನ್ಸ್ ಸೇವೆಯು ತೀರಾ ಬಡ ಹಾಗೂ ನಿರ್ಗತಿಕ ರೋಗಿಗಳಿಗೆ ಉಚಿತ ಸೇವೆ ನೀಡುವ ಹಾಗೂ ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವ ಗುರಿ ಹೊಂದಲಾಗಿದ್ದು, ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸುವಂತೆ ವಿನಂತಿಸಿಕೊಂಡಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
