ಕಾರ್ಕಳ: ದೀಪಾವಳಿ ಸಂದರ್ಭದಲ್ಲಿ ಕಾರ್ಕಳ ಅಂಬಾಭವಾನಿ ಕ್ರ್ಯಾಕರ್ಸ್ ರವರ ಪಟಾಕಿ ಮಾರಾಟದಲ್ಲಿ ಬಂದ ಲಾಭಾಂಶದಲ್ಲಿ ಈ ಬಾರಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಕಾರ್ಕಳ ತಾಲೂಕಿನ ಆಟೋ ಚಾಲಕರ 50 ಮಂದಿ ಮಕ್ಕಳಿಗೆ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಮುಖಾಂತರ ತಲಾ 5 ಸಾವಿರದಂತೆ ಒಟ್ಟು ರೂ. 2,50,000 ವಿದ್ಯಾರ್ಥಿವೇತನ ವಿತರಿಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿ ವೇತನಕ್ಕಾಗಿ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90 ಕಿಂತ ಹೆಚ್ಚಿನ ಅಂಕ ಪಡೆದ ಆಟೋ ಚಾಲಕರ ಮಕ್ಕಳು ಅಥವಾ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ವಿವರಗಳನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮಾಲಕರಾದ ಅವಿನಾಶ್ ಶೆಟ್ಟಿ ಮೊ. 9844552182 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.