ಕಾರ್ಕಳ:ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದ ಸ್ಕೂಟರ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಕೂಟರ್ ಸವಾರ ಮುದ್ದು ಮಾಧವ (84) ಎಂಬವರು ಮೃತಪಟ್ಟ ಸ್ಕೂಟರ್ ಸವಾರ. ಮುದ್ದು ಮಾಧವ ಅವರು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಸ್ಕೂಟರಿನಲ್ಲಿ ಬಂಗ್ಲೆಗುಡ್ಡೆ ಕಡೆಯಿಂದ ಜೋಡುರಸ್ತೆಗೆ ಹೋಗಿ ಡಿವೈಡರ್ ಬಳಿ ಬಲಬದಿಗೆ ಹೋಗಲು ಸ್ಕೂಟರನ್ನು ನಿಲ್ಲಿಸಿದಾಗ ಜೋಡುರಸ್ತೆ ಕಡೆಯಿಂದ ವೇಗವಾಗಿ ಬಂದ ಮಾರುತಿ ಇಕೋ ಕಾರು ಚಾಲಕ ನಾಗೇಶ್ ನಿಯಂತ್ರಣ ತಪ್ಪಿ ಮುದ್ದು ಮಾಧವ ಅವರ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಮುದ್ದು ಮಾಧವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ