ಕಾರ್ಕಳ, ಸೆ.17: ಕಾರ್ಕಳ ತಾಲೂಕು ವಕೀಲರ ಸಂಘದ 2025-27 ನೇ ಸಾಲಿಗೆ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಪ್ರಕಾಶ್ ಆಚಾರ್ ಹಾಗೂ ಉಪಾಧ್ಯಕ್ಷರಾಗಿ ಹರೀಶ್ ಅಧಿಕಾರಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪದ್ಮಪ್ರಸಾದ್ ಜೈನ್,ಜೊತೆ ಕಾರ್ಯದರ್ಶಿಯಾಗಿ ಶಬ್ನಮ್ ಖಾನ್, ಖಜಾಂಚಿಯಾಗಿ ವಿನುಷಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸನತ್ ಕುಮಾರ್ ಜೈನ್ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.
ಹಿರಿಯ ನ್ಯಾಯವಾದಿಗಳಾದ ಎಮ್.ಕೆ..ವಿಜಯಕುಮಾರ್ , ವಿಜಯರಾಜ್ ಶೆಟ್ಟಿ, ಶೇಖರ್ ಮಡಿವಾಳ್ ,ರವೀಂದ್ರ ಮೊಯ್ಲಿ, ನವೀನ್ ಚಂದ್ರ ಹೆಗ್ಡೆ ಮತ್ತಿತರರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.