Share this news

 

ಕಾರ್ಕಳ, ಅ 27: ಕುಟುಂಬದ ಶುಭ ಸಮಾರಂಭಗಳು, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆಯನ್ನು ವೃತ್ತಿ ಕೌಶಲ್ಯದ ಜೊತೆಗೆ ನಿರ್ವಹಿಸುವ ಸಂಸ್ಥೆ ಶಕ್ತಿ ಇವೆಂಟ್ಸ್ ಕಾರ್ಕಳದಲ್ಲಿ ಶುಭಾರಂಭಗೊಂಡಿದೆ.

ಕಾರ್ಕಳದ ಹೊಟೇಲ್ ಕಟೀಲ್ ಇಂಟರ್ ನ್ಯಾಷನಲ್ ನಲ್ಲಿ ನಡೆದ ನೂತನ ಸಂಸ್ಥೆಯ ಶುಭಾರಂಭದ ಸಮಾರಂಭವನ್ನು ಖ್ಯಾತ ಉದ್ಯಮಿಗಳಾದ ಗಿರೀಶ್ ಶೆಟ್ಟಿ ಕುಡ್ಪುಲಾಜೆ, ಬೋಳ ಶ್ರೀನಿವಾಸ್ ಕಾಮತ್, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು ಮತ್ತು ಉದ್ಯಮಿಗಳಾದ ನಿತ್ಯಾನಂದ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು.
ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಗಿರೀಶ್ ಶೆಟ್ಟಿ, ಕುಡುಪುಲಾಜೆ ಮಾತನಾಡಿ, ಯುವಕರಲ್ಲಿ ಉದ್ಯೋಗಾಸಕ್ತಿಗಿಂತ ಹೆಚ್ಚು ಉದ್ಯಮಶೀಲತೆಯನ್ನು ಬೆಳೆಸಬೇಕು ಸಾಮಾಜಿಕ ಜೀವನದ ಜೊತೆ ಜೊತೆಗೆ ಆರ್ಥಿಕ ಸ್ವಾವಲಂಬನೆಯ ಕಡೆಗೆ ಕೂಡ ಯುವಕರು ಗಮನ ಹರಿಸಬೇಕು ಹೆಚ್ಚಿನ ಇವೆಂಟ್ ಕಂಪನಿಗಳು ಬೆಂಗಳೂರು ಮತ್ತು ಮಂಗಳೂರು ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು ಕಾರ್ಕಳದಲ್ಲಿ ಈ ಸಂಸ್ಥೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಸಂಸ್ಥೆಯ ಪಾಲುದಾರರಾಗಿರುವ ಗುರುಪ್ರಸಾದ್ ನಾರಾವಿ ಶ್ರೀಕಾಂತ್ ಶೆಟ್ಟಿ ಮತ್ತು ಸಂತೋಷ್ ಅವರು ಅತಿಥಿಗಳನ್ನು ಸ್ವಾಗತಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *