ಕಾರ್ಕಳ: ರಸ್ತೆ ಬದಿಯಲ್ಲಿದ್ದ ಕುರಿಯೊಂದಕ್ಕೆ ಟೆಂಪೋ ಡಿಕ್ಕಿಯಾಗಿ ಕುರಿ ಸಾವನ್ನಪ್ಪಿರುವ ಘಟನೆ ಕಾರ್ಕಳ ಕೆಎಮ್ ಇ ಎಸ್ ಶಾಲೆ ಬಳಿಯ ಸ್ವಲ್ಪ ಮುಂದಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ರಜಾಕ್ ಅವರು ತಮ್ಮ ಕುರಿಯನ್ನು ಕೆಎಮ್ ಇ ಎಸ್ ಶಾಲೆ ಬಳಿಯ ಸ್ವಲ್ಪ ಮುಂದಕ್ಕೆ ರಸ್ತೆಯ ಬದಿಯಲ್ಲಿ ಕುರಿಯನ್ನು ಹಿಡಿದುಕೊಂದು ಹೋಗುತ್ತಿರುವಾಗ ಪುಲ್ಕೇರಿ ಕಡೆಯಿಂದ ವೇಗವಾಗಿ ಬಂದ ಟೆಂಪೋ ಡಿಕ್ಕಿಯಾಗಿ ಕುರಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.