
ಕಾರ್ಕಳ,ಡಿ,11: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಸ್ವಸ್ಥ ವ್ಯಕ್ತಿಯೊಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಶಿರ್ಲಾಲು ನಿವಾಸಿ ಸದಾನಂದ ಪೂಜಾರಿ (60) ಮೃತಪಟ್ಟವರು.
ಸದಾನಂದ ಅವರ ಹೊಟ್ಟೆಯಲ್ಲಿ ಗಡ್ಡೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಡಿ.5 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.ಆದರೆ ಮರುದಿನ (ಡಿ.6) ಮುಂಜಾನೆ ನೋವು ಹೆಚ್ಚಾದ ಕಾರಣ ಬೈಕಿನಲ್ಲಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ತೆರಳಿ ನೋವಿಗೆ ಇಂಜೆಕ್ಷನ್ ಪಡೆದು ವಿಶ್ರಾಂತಿ ಪಡೆಯದೆ ಮನೆಗೆ ವಾಪಾಸಾಗುತ್ತಿದ್ದಾಗ ದುರ್ಗಾ ಗ್ರಾಮದ ತೆಳ್ಳಾರು ಸೇತುವೆ ಬಳಿ ತಲೆ ತಿರುಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಡಿ.11 ರಂದು ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
