Share this news

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಗೋಬಿ ಮಂಚೂರಿಗೆ ಬಳಸುವ ಬಣ್ಣ, ಕಬಾಬ್ ಗೆ ಬಳಸುವ ಕೃತಕ ಬಣ್ಣವನ್ನು ನಿಷೇಧ ಮಾಡಲಾಗಿದೆ. ಈಗ ಟೀ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ ಹಿನ್ನಲೆಯಲ್ಲಿ, ಟೀ ಪುಡಿಯನ್ನೇ ಬ್ಯಾನ್ ಮಾಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಈ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಬ್ಯಾನ್ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ರಾಜ್ಯದ ವಿವಿಧೆಡೆ ಟೀ ಪುಡಿ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ಸ್ ಪೈಕಿ 45 ಟೀ ಪುಡಿ ಸ್ಯಾಂಪಲ್ಸ್ ಅಸುರಕ್ಷಿತವಾಗಿರುವುದು ಕಂಡು ಬಂದಿದೆ. ಪರಿಶೀಲನೆ ವೇಳೆ ಟೀ ಪೌಡರ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖವಾಗಿ ಚಹಾದ ಪೌಡರ್ ಕಲರ್ ಹೆಚ್ಚಿಸಲು ಟೀ ಬಣ್ಣ ಬರಲು ಕೆಮಿಕಲ್ ಬಣ್ಣಗಳ ಬಳಕೆ ಮಾಡಲಾಗಿತ್ತಿದೆ ಎಂಬ ಆತಂಕಕಾರಿ ಅಂಶ ಪತ್ತೆಯಾಗಿದೆ.

ರಸ್ತೆ ಬದಿಯ ಕೆಲವು ಚಹಾದ ಅಂಗಡಿಗಳಲ್ಲಿ ತೂಕ ಹೆಚ್ಚಿಸಲು ಟೀ ಪುಡಿಯಲ್ಲಿ ಕೆಲವು ಮರದ ಪುಡಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಕೂಡ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಟೀ ಪುಡಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧಾರ ಮಾಡಿದೆ.

                        

                          

                        

                          

 

Leave a Reply

Your email address will not be published. Required fields are marked *