ಸಿದ್ದಾಪುರ: ಆಗಸ್ಟ್.3 ಶನಿವಾರ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗಾಸನ ಸ್ಪರ್ಧೆ ನಡೆಯಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಸ್ಪರ್ದಾಳುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಲಯ ಸಿದ್ದಾಪುರ ಜಂಟಿ ಆಶ್ರಯದಲ್ಲಿ ನಡೆಯುವ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆ ವ್ಯವಸ್ಥಿತವಾಗಿ ನಡೆಯುವಂತೆ ನಾವೆಲ್ಲರೂ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಸಿದ್ದಾಪುರ ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಸಿದ್ದಾಪುರ ಶ್ರೀನಾಥ ಪೈ ಹೇಳಿದರು.
ಅವರು ಸಿದ್ದಾಪುರ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಪ್ರಾಂತ ಯೋಗಾಸನ ಸ್ಪರ್ಧೆಯ ಪೂರ್ವ ಸಿದ್ದತಾ ಬೈಠಕ್ ನಲ್ಲಿ ಮಾತನಾಡಿದರು.
ಪೂರ್ವ ಸಿದ್ಧತಾ ಬೈಠಕ್ ನಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷ ಪಾಂಡುರAಗ ಪೈ, ಕಾರ್ಯದರ್ಶಿ ಮಹೇಶ ಹೈಕಾಡಿ, ಜಿಲ್ಲಾ ಯೋಗ ಪ್ರಮುಖ್ ಸಂಜಯ್, ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯಕುಮಾರ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತ, ಜಿಲ್ಲಾ ಮಾತೃಭಾರತಿ ಪ್ರಮುಖ್ ಶ್ರೀಮತಿ ಸಿಂಧೂ ಐತಾಳ, ಶಾಂತಿಧಾಮ ಪೂರ್ವಗುರುಕುಲ ಕೋಟೇಶ್ವರ ಸಂಸ್ಥೆಯ ಮಾತಾಜಿ ಶ್ರೀಮತಿ ಆಶ್ರಿತಾ, ಸರಸ್ವತಿ ವಿದ್ಯಾಲಯ ಸಿದ್ದಾಪುರದ ದೈಹಿಕ ಶಿಕ್ಷಣ ಮಾತಾಜಿ ಶ್ರೀಮತಿ ಉಷಾ ಶೆಟ್ಟಿ ಉಪಸ್ಥಿತರಿದ್ದರು .
ವಿದ್ಯಾಭಾರತಿ ಕರ್ನಾಟಕದ ಈ ಶೈಕ್ಷಣಿಕ ವರ್ಷದ ರಾಜ್ಯಮಟ್ಟದ ಸ್ಪರ್ಧೆ ಇದಾಗಿದ್ದು,ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಯೋಗಾಪಟುಗಳು ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಜ್ಯದ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಆಯ್ಕೆಯಾದ ಯೋಗಾಸನದ ತಂಡಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.