Share this news

ಬೆಂಗಳೂರು, ಸೆ.08:ಮಂಡ್ಯದ ಚೆನ್ನೇಗೌಡ ಬಡಾವಣೆಯ ನಿವಾಸಿಗಳ ಗಣೇಶೋತ್ಸವ ಮೆರವಣಿಗೆ ವೇಳೆ ಏಕಾಎಕಿ ಲೈಟ್ ಆಫ್ ಮಾಡಿ ಕಲ್ಲು ತೂರಾಟ‌ ಮಾಡಲಾಗಿದೆ. ಇದು ಪೂರ್ವ ನಿಯೋಜಿತ ದಾಳಿಯಾಗಿದ್ದು, ಗಲಭೆ ಸೃಷ್ಠಿಸಲೆಂದೇ ಈ ಷಡ್ಯಂತ್ರವನ್ನು ರೂಪಿಸಿದ್ದಾರೆ. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಬೇಕೆಂದು ಆಗ್ರಹಿಸಿದೆ.
ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಂಭವಿಸಿದ್ದ ಗಲಭೆಯಲ್ಲಿ ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್ ಗಳನ್ನು ಹಿಂದೂ ಅಂಗಡಿಗಳ ಮೇಲೆ ಹಾಕಿ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿರುವ ಕಹಿ ಘಟನೆಯ ಬಳಿಕ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಎಲ್ಲಾ ಗಣೇಶ ಮಂಡಳಿಯು ಸುರಕ್ಷತಾ ಭದ್ರತೆಯನ್ನು ಒದಗಿಸಲು ಮನವಿ ಮಾಡಿದ್ದರೂ ಗಣೇಶೋತ್ಸವದ ಮೆರವಣಿಗೆಯ ಮೇಲೆ ಆಕ್ರಮಣವಾಗಿರುವುದು ಅತ್ಯಂತ ಖಂಡನೀಯ.

ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ, ನವರಾತ್ರಿ, ರಾಮನವಮಿ, ಹನುಮಾನ್ ಜಯಂತಿ ಪ್ರತಿಯೊಂದು ಮೆರವಣಿಗೆ ಮೇಲೆಯೂ ಕಲ್ಲು ತೂರಾಟ ಆಗುತ್ತಿದೆ. ಇದರಿಂದ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಾಗಿ ಬಹು ಸಂಖ್ಯಾತ ಹಿಂದೂಗಳ ಮೇಲೆ ಮಾರಣಾಂತಿಕ ಅಕ್ರಮಗಳಾಗುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೃತ್ಯಕ್ಕೆ ಎಸಗಿದವರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ರಾಜ್ಯಾದ್ಯಂತ ಇನ್ನೂ ಅನೇಕ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಬಾಕಿ ಇದ್ದು ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *