ವಾಷಿಂಗ್ಟನ್: ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತ ಮೂಲದ ಅಮೆರಿಕದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ಈ ಕಾರ್ಯಾಚರಣೆ ಹಲವಾರು ಹಿಂದೆಯೇ ಆರಂಭವಾಗಬೇಕಿತ್ತು. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಪದೇ ಪದೇ ಮುಂದೂಡುತ್ತಲೇ ಬರಲಾಗಿತ್ತು. ಕಡೆಗೂ ಅದಕ್ಕೆ ಕಾಲ ಕೂಡಿಬಂದಿದೆ.
ಬೋಯಿಂಗ್ನ ಸ್ಟಾರ್ಲೈನರ್ ಸಮಸ್ಯೆಗಳಿಂದಾಗಿ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್ಎಕ್ಸ್ ಶುಕ್ರವಾರ ಸಂಜೆ 7:03 ಕ್ಕೆ EDT (ಶನಿವಾರ ಬೆಳಿಗ್ಗೆ 4:30 ಕ್ಕೆ IST) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕ್ರೂ-10 ಮಿಷನ್ ಅನ್ನು ಪ್ರಾರಂಭಿಸಿದೆ
ಕ್ರೂ-10 ಕಾರ್ಯಾಚರಣೆಯಲ್ಲಿ ಫಾಲ್ಕನ್ 9 ರಾಕೆಟ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ದಿತು.ಈ ಕಾರ್ಯಾಚರಣೆಯು ನಾಲ್ಕು ಸಿಬ್ಬಂದಿಯನ್ನು ISS ಗೆ ಕಳುಹಿಸಿತು. ನಾಸಾ ಗಗನಯಾತ್ರಿಗಳಾದ ಆನ್ ಮೆಕ್ಕ್ಲೇನ್ ಮತ್ತು ನಿಕೋಲ್ ಅಯರ್ಸ್, JAXA (ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ) ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಯಿತು.
2024ರ ಜೂನ್ ನಲ್ಲಿ ಕೇವಲ 8 ದಿನಗಳ ಕಾರ್ಯಾಚರಣೆಗಾಗಿ, ಭೂಮಿಯಿಂದ ಕೇವಲ 408 ಕಿ.ಮೀ. ಮೇಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ(ಐಎಸ್ಎಸ್) ಈ ಇಬ್ಬರೂ ವಿಜ್ಞಾನಿಗಳು ತೆರಳಿದ್ದರು. ಬೋಯಿಂಗ್ ಸಂಸ್ಥೆಯ ‘ಸ್ಟಾರ್ ಲೈನರ್ ಕ್ಯಾಪ್ಸೂಲ್’ ನಲ್ಲಿ ಐಎಸ್ಎಸ್ ಗೆ ಪ್ರಯಾಣಿಸಿದ್ದ ಇವರು, ಅಲ್ಲಿ 8 ದಿನಗಳ ಕಾರ್ಯಾಚರಣೆಯನ್ನು ಮುಗಿಸಿಕೊಂಡು ಅದೇ ಕ್ಯಾಪ್ಸೂಲ್ ನಲ್ಲಿ ಪುನಃ ಭೂಮಿಗೆ ಬಂದಿಳಿಯಬೇಕಿತ್ತು. ತಾಂತ್ರಿಕ ಅಡಚಣೆಗಳಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಯಿತು.
K