Share this news

ಕಾರ್ಕಳ: ಸೂರಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯಲಿರುವ 33ನೇ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸೂರಾಲು ಗುಂಡಾಜೆ ಶಾಲಾ ಮೈದಾನದಲ್ಲಿ “ಕ್ರೀಡೋತ್ಸವ 2025 ಆ. 17ರಂದು ಜರುಗಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ತಾರಾನಾಥ ಕೋಟ್ಯಾನ್ ಸೂರಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು , ಗಣೇಶೋತ್ಸವ ಸಮಿತಿಯ ಹಿರಿಯ ಸದಸ್ಯರಾದ ರಮೇಶ್ ದೇವಾಡಿಗ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ. ಎಂ. ಶೆಟ್ಟಿ, ಜಯಪ್ರಕಾಶ್ ದೇವಾಡಿಗ,ಸಮಿತಿಯ ಗೌರವ ಸಲಹೆಗಾರರಾದ ರಮೇಶ್ ದೇವಾಡಿಗ,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಉಮೇಶ್ ಕುಲಾಲ್,ಕ್ರೀಡಾ ಕಾರ್ಯದರ್ಶಿ ವಿಷ್ಣು ಕೋಟ್ಯಾನ್,ಕಾರ್ಯದರ್ಶಿ ಮಂಜುನಾಥ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರಾದ ವಸಂತ ಕುಲಾಲ್,ಪ್ರವೀಶ್.ಎಚ್.ರಾವ್,ಮೀರಾ ಜಯಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯಿನಿ ಜಬೀನಾ. ಇ.,ಹರೀಶ್ ಅಂಚನ್,ಸುಭಾಶ್ ಪೂಜಾರಿ, ಮನಿಷ್ ಕುಮಾರ್, ಹಾಗೂ ಗಣೇಶೋತ್ಸವ ಸಮಿತಿಯ ಪದಾಧಿಕಾರಿ/ಸದಸ್ಯರು ಉಪಸ್ಥಿತರಿದ್ದರು
ನಿಶ್ಮಿತಾ ಪ್ರಾರ್ಥಿಸಿದರು. ದಿಶಾ ರಾವ್ ಸ್ವಾಗತಿಸಿ, ಶ್ರೀಜಿತ್ ವಂದಿಸಿದರು. ಧನುಷ್ ರಾವ್ ನಿರೂಪಿಸಿದರು.

ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ,ಸಾರ್ವಜನಿಕ ಯುವಕ ಯುವತಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸಾರ್ವಜನಿಕ ಯುವಕರ ವಾಲಿಬಾಲ್ ಪಂದ್ಯಾಟಲ್ಲಿ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಕಜೆ ಪ್ರಥಮ, ಕುಂಭಕAಠಿನಿ ಇರ್ವತ್ತೂರು ದ್ವಿತೀಯ,ಯುವಕರ ಹಗ್ಗಜಗ್ಗಾಟ, ಜೋಡುಕಟ್ಟೆ ಫ್ರೆಂಡ್ಸ್ ಪ್ರಥಮ, ಮಲ್ಪೆ ರಾಕೇಶ್ 8ಪಿ.ಎಮ್ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟದಲ್ಲಿ, ಸುನೀತಾ ಸತೀಶ್ ತಂಡ ಪ್ರಥಮ, ಸಂಗೀತ ಕೋಟ್ಯಾನ್ ತಂಡ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ ಪೂಜಾರಿ ಸೂರಾಲು ಗುತ್ತು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *