ಸುರತ್ಕಲ್ : ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಬೆದರಿಕೆ ಸಂದೇಶ ಕಳುಹಿಸಿ ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಶಾರಿಕ್ ಹಾಗೂ ಆತನ ತಾಯಿ ನೂರ್‌ಜಹಾನ್ ಎಂಬವರು ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಅ.22ರಂದು ಮಂಗಳೂರು ಮಧ್ಯ ಗ್ರಾಮದ ಯುವತಿಯೋರ್ವಳ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ಶಾರಿಕ್, ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಯುವತಿಯ ಅಣ್ಣನಿಗೆ ಮತ್ತು ಅವರ ಸ್ನೇಹಿತರಿಗೆ ಕಳುಹಿಸಲಾಗಿದೆ ಎಂಬ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅನುಸಾರ, ಸುರತ್ಕಲ್ ಠಾಣಾ ಪೊಲೀಸರು ಅ.22 ರಂದು ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಅ, 66ಆ ಮತ್ತು 67ಂ & ಃ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಗಿತ್ತು. ಈ ವೇಳೆ ಸುರತ್ಕಲ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಅ .24 ರಂದು, ಯುವತಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಅವಳು ಮಾನಸಿಕ ತೊಂದರೆಗೊಳಗಾಗಿದ್ದರು. ತೀವ್ರ ನೊಂದ ಮನಸ್ಥಿತಿಯಲ್ಲಿ, ಶಾರೀಕ್ ಮತ್ತು ಅವರ ತಾಯಿ ನೂರ್ ಜಹಾನ್ ರವರ ಕಿರುಕುಳದಿಂದ ಆತ್ಮಹತ್ಯೆಗೆ ತೀರ್ಮಾನಿಸಿರುವುದಾಗಿ ಪತ್ರ ಬರೆದು, ಇಂದು ಮುಂಜಾನೆ 10 ಮಾತ್ರೆಗಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಳಿಕ, ಯುವತಿ ಮಾಹಿತಿ ನೀಡಿದ ಪ್ರಕಾರ, ಶಾರೀಕ್ ಅವರ ನಿರಂತರ ಕಿರುಕುಳದಿಂದ ತಾನು ಭೀತಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಆಧಾರದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 125/24 ಅನ್ನು ಭಾರತೀಯ ದಂಡ ಸಂಹಿತೆಯ 78(1)(I), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ದೋಷಾರೋಪಣೆ ಮಾಡಲಾಗಿದೆ. ಶಾರೀಕನನ್ನು ಈಗಾಗಲೇ ಬಂಧಿಸಲಾಗಿದ್ದು ಮತ್ತು ತನಿಖೆ ಮುಂದುವರಿದಿದೆ.