ಕಾರ್ಕಳ: ಎಲ್ಲಾ ವಲಯಗಳಲ್ಲಿ ಕಂಡು ಬರುವಂತೆ ಕೃಷಿ ಹಾಗೂ ತೋಟಗಾರಿಕೆ ವಲಯದಲ್ಲಿ ಸಹ ಅವಿಷ್ಕಾರಗೊಂಡಿರುವ ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ವೆಚ್ಚ ಕಡಿಮೆಯಾಗಿ ಇಳುವರಿ ಹೆಚ್ಚಿಸುವ ಮೂಲಕ ಕೃಷಿಕರ ಆದಾಯ ಹೆಚ್ಚಿಸಲು ಸಾಧ್ಯವೆಂದು ಮಾಜಿ ತಾಲೂಕು ಪಂಚಾಯತ್ ಮಾಜಿ ಅದ್ಯಕ್ಷ ವಿಕ್ರಂ ಹೆಗ್ಡೆ ರವರು ಅಭಿಪ್ರಾಯಪಟ್ಟರು. ಅವರು ಶುಕ್ರವಾರ ತೋಟಗಾರಿಕೆ ಇಲಾಖೆ, ಕಾರ್ಕಳ, ಗ್ರಾಮ ಪಂಚಾಯತ್, ನೀರೆ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಹಾಗೂ ನೀರೆ–ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ನೀರೆ ಇವರ ಸಂಯುಕ್ತ ಆಶ್ರಯದಲ್ಲಿ ನೀರೆ–ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿದ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಇತ್ತೀಚಿನ ತಾಂತ್ರಿಕತೆಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನೀರೆ-ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್, ನೀರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಗೋವಿಂದ ನಾಯ್ಕ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ|| ಧನಂಜಯ ಹಾಗೂ ನೀರೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೀರೆ-ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ನಿರ್ದೇಶಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್ ಪ್ರಭು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಚೈತನ್ಯ, ತೊಟಗಾರಿಕೆ ತಜ್ಞರು, ಡಾ.ನವೀನ, ಬೇಸಾಯ ಶಾಸ್ತ್ರತಜ್ಞರು, ಡಾ.ಭೂಮಿಕಾ ಹೆಚ್.ಆರ್, ತೋಟಗಾರಿಕೆ ತಜ್ಞರು ಹಾಗೂ ಶ್ರೀ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕರು ಭಾಗವಸಿದ್ದರು.
ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ
ಶ್ರೀನಿವಾಸ ಬಿ.ವಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನೀರೆ-ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಸಂತೋಷ ನಾಯ್ಕ್ ವಂದಿಸಿದರು. ನೀರೆ ಗ್ರಾಮ ಪಂಚಾಯತ್ನ ಪಂಚಾಯತಿ ಪಿಡಿಒ ಅಂಕಿತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
`