ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2024 – 25ನೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಷಯವಾರು ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಮಾತನಾಡಿ ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಲು ಅಚಲವಾದ ಏಕಾಗ್ರತೆ ಹೊಂದಿರಬೇಕು. ವಿವಿಧ ವಿಷಯಗಳಲ್ಲಿ ಪೂರ್ಣಾಂಕವನ್ನು ಪಡೆದು ಸಂಸ್ಥೆಯ ವಿಷಯ ಶಿಕ್ಷಕರು ಸಂತಸ ಪಡುವ ದಿನವಾಗಿದೆ. ಹೀಗೆ ವಿದ್ಯಾರ್ಥಿಗಳ ಜೀವನ ಯಶಸ್ಸು, ಕೀರ್ತಿ ಯಿಂದ ಸಮಾಜಕ್ಕೆ ಆದರ್ಶವಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ , ಶಿಕ್ಷಕರಾದ ಮಹೇಶ್ ಹೈಕಾಡಿ, ಸಾವಿತ್ರಿ ಕಿಣಿ, ವೇದವ್ಯಾಸ ತಂತ್ರಿ, ಪಂಚಮಿ, ಮೀನಾಕ್ಷಿ, ನಿಶಾನ್ ಶೆಟ್ಟಿ, ಸುಮನ್ ನಾಯಕ್, ಸುಮನಾವಾಣಿ, ಸೌಪರ್ಣಿಕಾ ಜೋಷಿ, ನವ್ಯಾ ಪೈ ಮತ್ತು ವಿದ್ಯಾರ್ಥಿಗಳು , ಗುರೂಜಿ, ಮಾತಾಜಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನಿರೂಪಿಸಿ,ವಂದಿಸಿದರು.