Share this news

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಭಾಷಣ ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಮಾಸ್ಟರ್ ಮೈಂಡ್ ಅಜರ್ ನನ್ನು ನಾಲ್ಕು ವರ್ಷಗಳ ನಂತರ ಬಂಧಿಸಲಾಗಿದೆ. ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕಂಡಿದ್ದ ಆರೋಪಿ ಅಜರ್ ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ತೀವೃ ವಿಚಾರಣೆ ನಡೆಸುತ್ತಿದ್ದಾರೆ
2019 ರಲ್ಲಿ ಸಿಎಎ ವಿಚಾರವಾಗಿ ಟೌನ್ ಹಾಲ್ ಬಳಿ ನಡೆದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ, ಚಕ್ರವರ್ತಿ ಸೂಲಿಬೆಲೆ ಸಿಎಎ ಪರ ಭಾಷಣ ಮಾಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದ ವರುಣ್ ಎಂಬಾತನ ಮೇಲೆ ಹಲ್ಲೆಯಾಗಿತ್ತು. ಮುಖಂಡರ ಹತ್ಯೆ ಮಿಸ್ಸಾಗಿ ವರುಣ್ ಮೇಲೆ ಹಲ್ಲೆಯಾಗಿತ್ತು. ಈ ಘಟನೆಯ ನಂತರ 6 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಘಟನೆ ಸಂಬAಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ನಾಲ್ಕು ವರ್ಷಗಳಿಂದ ಆ ಪ್ರಕರಣದ ಪ್ರಮುಖ ಆರೋಪಿ ಅಜರ್ ಎಸ್ಕೇಪ್ ಆಗಿದ್ದ. ಘಟನೆಯ ಬಳಿಕ ಸೌದಿಗೆ ಎಸ್ಕೇಪ್ ಆಗಿದ್ದ. ತನ್ನ ಪತ್ನಿಯ ಸಹೋದರರು ಸೌದಿಯಲ್ಲಿ ಇದ್ದ ಹಿನ್ನೆಲೆ ಅಲ್ಲಿಗೆ ಎಸ್ಕೇಪ್ ಆಗಿದ್ದ. ಐದು ತಿಂಗಳು ಸೌದಿಯಲ್ಲಿ ತಲೆಮರೆಸಿಕೊಂಡಿದ್ದ ಅಜರ್ ಬಳಿಕ ಅಲ್ಲಿಂದ ತನ್ನ ಪತ್ನಿಯ ಮನೆಗೆ ಬಂದಿದ್ದ. ಅಲ್ಲಿಂದ ಬಂದ ಬಳಿಕ ಕೋಲಾರದ ಬಂಗಾರಪೇಟೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಿದ್ದ,ಕಳೆದ ನಾಲ್ಕು ವರ್ಷಗಳಿಂದ ಪತ್ನಿಯ ಮನೆಯಲ್ಲಿ ಇದ್ದುಕೊಂಡು ಕಾರು ಡಿಲಿಂಗ್ ಮಾಡಿಕೊಂಡಿದ್ದ, ಅಲ್ಲದೇ ಎಸ್ ಡಿ ಪಿ ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಇತ್ತ ಅಜರ್ ಗಾಗಿ ಎನ್ ಐ ಎ ಅಧಿಕಾರಿಗಳು ಕೂಡ ಸಾಕಷ್ಟು ಹುಡುಕಾಟ ನಡೆಸಿದ್ದರು. ಸದ್ಯ ಅಜರ್ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬಂಗಾರ ಪೇಟೆ ಹೆಂಡತಿ ಮನೆಯಲ್ಲಿದ್ದಾಗಲೇ ಸೆರೆಹಿಡಿದಿದ್ದಾರೆ.ಅತ್ಯಂತ ಕುತೂಹಲದ ಸಂಗತಿ ಎಂದರೆ ಅಜರ್ ಬಗ್ಗೆ ಆ ಒಂದು ನಂಬರ್ ನಿಂದ ಮಾಹಿತಿ ಲಭ್ಯವಾಗಿತ್ತು. ಆ ನಂಬರಿನ ಕಾಲ್ ಡಿಟೇಲ್ ತೆಗೆದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಬಂಗಾರಪೇಟೆಯಲ್ಲಿ ಕಾರ್ ಡಿಲಿಂಗ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಆರೋಪಿ ಅಜರ್ ನನ್ನು ಬಂಧಿಸಿ ವಶಕ್ಕೆ ಪಡೆದ ಪೊಲೀಸರು 14 ದಿನ ತಮ್ಮ ವಶಕ್ಕೆ ಪಡೆದು ತೀವೃ ವಿಚಾರಣೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *