Share this news

ಬೆಳ್ತಂಗಡಿ : ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಸುಮಾರು 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ವಾರಂಟ್ ಆಸಾಮಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಹೊಸದುರ್ಗ ತಾಲೂಕು ಚೆಟ್ಟರಿಕಲ್ ನಿವಾಸಿ ಡೆನ್ನಿ ಜೋಸೆಫ್ ಅಲಿಯಾಸ್ ಅಂತೋನಿ ಬಿನ್ ಜೋಸೆಫ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಇನ್ಸ್‌ ಪೆಕ್ಟರ್ ಬಿ ಜಿ ಸುಬ್ಬಾಪುರ ಮಠ, ಪಿಎಸ್ಸೆ ಮುರಳೀಧರ್ ಅವರ ನಿರ್ದೇಶನದಂತೆ, ಸಿಬ್ಬಂದಿಗಳಾದ ವೃಷಭ, ಪಳನಿವೇಲು ಹಾಗೂ ಮುನಿಯ ನಾಯ್ಕ ಅವರು ಶನಿವಾರ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

                       in 

Leave a Reply

Your email address will not be published. Required fields are marked *