Share this news

ಕಾರ್ಕಳ: ಅತ್ತೂರು ಸಾಂತ್ ಮಾರಿ ಎಂದೇ ಪ್ರಸಿದ್ಧಿ ಪಡೆದ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಜ 26ರಿಂದ 30ರವರೆಗೆ ಒಟ್ಟು 5 ದಿನಗಳ ಕಾಲ ನಡೆಯಲಿರುವ ಕಾರ್ಕಳದ ಅತ್ತೂರಿನ ಪುಣ್ಯಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಯಿಂದ ಭಕ್ತರು ಆಗಮಿಸಿ ಮೊಂಬತ್ತಿಗಳನ್ನು ಉರಿಸಿ ಪ್ರಾರ್ಥಿಸಿ ಕೃತಾರ್ಥರಾಗುತ್ತಿದ್ದಾರೆ.

ಈ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ , ಎಂಎಲ್‌ಸಿ ಐವನ್ ಡಿಸೋಜ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಸಹಿತ ಹಲವಾರು ಗಣ್ಯರು ಪಾಲ್ಗೊಂಡು ಪ್ರಾರ್ಥನೆಯಲ್ಲಿ ಭಾಗಿಯಾಗಿ ಧರ್ಮಗುರುಗಳಿಗೆ ಶುಭಕೋರಿದರು

ಐದು ದಿನಗಳ ಕಾರ್ಯಕ್ರಮದ ಅಂಗವಾಗಿ ಬುಧವಾರ ಹತ್ತು ಬಲಿಪೂಜೆಗಳನ್ನು ಅರ್ಪಿಸಲಾಯಿತು, ಜನಸಾಗರ ಪುಣ್ಯಕ್ಷೇತ್ರದ ವಠಾರದ ಸುತ್ತಮುತ್ತ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಒಂದಾದರು. ಪಾಲಕ ಸಂತ ಲಾರೆನ್ಸರ ಸಮುಕದಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು. ಪವಾಡ ಮೂರ್ತಿಯ ಬಳಿ ಸಾಲು ನಿಂತು ಭಕ್ತಿಪರವಶೆಯಿಂದ ಪ್ರಾರ್ಥನೆಯಲ್ಲಿ ಮಗ್ನರಾದರು.

ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ, ನಿವೃತ ಧರ್ಮಾಧ್ಯಕ್ಷರು ಅ. ವಂ. ಡಾ. ಅಲೋಶಿಯಸ್ ಪಾಲ್ ಡಿಸೋಜ ಅವರು ಹಬ್ಬದ ಬಲಿಪೂಜೆಯನ್ನು ಅರ್ಪಿಸಿದರು. ಉಳಿದ ಪೂಜೆಗಳನ್ನು ಧರ್ಮಗುರು ವಂ.ಸ್ವಾಮಿ.(ಡಾ) ಜೆನ್ಸಿಲ್ ಆಳ್ವಾ, ಮಿಲಾಗ್ರಿಸ್ ಕ್ಯಾಥೆಡ್ರಲ್, ಶಿವಮೊಗ್ಗ ಧರ್ಮಕ್ಷೇತ್ರದÀ ವಂ.ಸ್ವಾಮಿ..ಸ್ಟ್ಯಾನಿ ಡಿಸೋಜ, ಬಾರ್ಕೂರಿನ ವಂ.ಸ್ವಾಮಿ.ರೊನಾಲ್ಡ್ ಮಿರಾಂಡಾ, ಅಡ್ಯಪಾಡಿಯ ವಂ.ಸ್ವಾಮಿ. ಫ್ರಾನ್ಸಿಸ್ ರೊಡ್ರಿಗಸ್, ಚಿಕ್ಕಮಂಗಳೂರು ಧರ್ಮಕ್ಷೇತ್ರದÀ ವಂ.ಸ್ವಾಮಿ. ಪಾವ್ಲ್ ಡಿಸೋಜ, ವಂ.ಸ್ವಾಮಿ.ಸುನಿಲ್ ಡಿಸಿಲ್ವ, ಸಾಸ್ತಾನ್ ವಂ.ಸ್ವಾಮಿ.ಜೋಸೆಫ್ ಸಿರಿಲ್ ಡಿಸೋಜ, , ಕುಂದಾಪುರದ ಒಸಿಡಿ ಕಟ್ಕೆರೆ, ವಂ.ಸ್ವಾಮಿ. ಕ್ಯಾನುಟ್ ಬಾರ್ಬೋಜ, ಮಿಯಾರ್ ಅರ್ಪಿಸಿದರು.

ರೋಗಿಗಳಿಗೆ ಮತ್ತು ಬಳಲುತ್ತಿರುವವರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಡವರು ಪೋಷಕ ಸಂತ ಲಾರೆನ್ಸ್ ಅವರ ಹುತಾತ್ಮತೆಯನ್ನು ಗೌರವಿಸಲು ಭಕ್ತರು ಒಟ್ಟುಗೂಡಿದಾಗ ದೇವಾಲಯದ ವಾತಾವರಣವು ಏಕತೆಯ ಭಾವದಿಂದ ತುಂಬಿತ್ತು. ಶ್ರೀಮಂತ ಸಂಪ್ರದಾಯಗಳು, ಪ್ರಾರ್ಥನೆಗಳು ಮತ್ತು ಸ್ತೋತ್ರಗಳು ದಾನ, ಪ್ರೀತಿ ಮತ್ತು ಒಗ್ಗಟ್ಟಿನ ಮನೋಭಾವವು ಪ್ರವರ್ಧಮಾನಕ್ಕೆ ಬಂದ ವಾತಾವರಣವನ್ನು ಸೃಷ್ಟಿಸಿದವು.

ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಇಂದು ಕೊನೆಯ ದಿನವಾಗಿದ್ದು 08 ಬಲಿಪೂಜೆಗಳನ್ನು ಆಚರಿಸಲಾಗುತ್ತದೆ ಕೊನೆಯ ಬಲಿಪೂಜೆ ರಾತ್ರಿ 8.30 ಕ್ಕೆ ಮತ್ತು ನಂತರ ಹಬ್ಬದ ಧ್ವಜವನ್ನು ಇಳಿಸಲಾಗುತ್ತದೆ ಮತ್ತು ಹೀಗೆ ಐದು ದಿನಗಳ ಕಾಲ ನಡೆದ ಉತ್ಸವಗಳು ಕೊನೆಗೊಳ್ಳುತ್ತವೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *