ಬೆಳ್ತಂಗಡಿ, ಆ 29 : ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಸುಳ್ಳು ಹೇಳಿದ್ದ ಮುಸುಕುಧಾರಿ ಚಿನ್ನಯ್ಯನ ಬಂಧನವಾದ ಬಳಿಕ ಒಂದೊಂದೇ ವಿಚಾರಗಳು ಬಯಲಾಗುತ್ತಿದ್ದು,ಎಸ್ಐಟಿ ವ ಅಧಿಕಾರಿಗಳು ಗುರುವಾರ ಚಿನ್ನಯ್ಯನನ್ನು ತೀವ್ರ ವಿಚಾರಣೆಯ ಒಳಪಡಿಸಿದ್ದು, ಈ ವೇಳೆ ಚಿನ್ನಯ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದು,ನನಗೆ ಸುಮಾರು 4 ಲಕ್ಷ ರೂ ಹಣ ನೀಡಿ ಸುಳ್ಳು ಹೇಳುವಂತೆ ಬೆದರಿಕೆ ಹಾಕಿದ್ದಾರೆ ಎನ್ನುವ ಮೂಲಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಂತಾಗಿದೆ.
ಇನ್ನಷ್ಟು ವಿವರಗಳನ್ನು ಕೆದಕಿದ ಎಸ್ಐಟಿ ಅಧಿಕಾರಿಗಳು, ಚೆನ್ನಯ್ಯನ ಬಳಿ ತಲೆ ಬುರುಡೆಯ ಜತೆ ಹಣ ಕೊಟ್ಟಿದ್ದ ಸೂತ್ರದಾರಿಗಳು ನೂರಾರು ಶವ ಹೂತಿಟ್ಟಿರುವುದಾಗಿ ಸುಳ್ಳು ಹೇಳಬೇಕು ಅಂತ ಬೆದರಿಕೆ ಹಾಕಿದ್ದರು ಅಂತ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣದಿಂದ ನಾನು ದೂರವಾಗಲು ಬಯಸಿದಾಗ ನಿನ್ನನ್ನು ಹೊಡೆದು ಮುಗಿಸುವುದಾಗಿ ನನಗೆ ಬೆದರಿಕೆ ಹಾಕಿದರು.ಮಾತ್ರವಲ್ಲದೇ ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ, ಐದು ಹತ್ತು ಸಾವಿರ ಹಂತ ಹಂತವಾಗಿ 3.50 ರಿಂದ 4 ಲಕ್ಷ ರೂವರೆಗೆ ಹಣ ನೀಡಿದರು ಎಂದು ಹೇಳಿಕೆ ನೀಡಿದ್ದಾನೆ.