Share this news

 

 

 

 

ಡಿಸೆಂಬರ್ 31 ಬಂತೆಂದರೆ ನಗರಗಳ ಐಟಿ,ಬಿಟಿ ಮಂದಿಗೆ ಖುಷಿಯೋ,ಖುಷಿ. ಅದರಲ್ಲೂ ಲಕ್ಷ ಲಕ್ಷ ಸಂಬಳ ಎಣಿಸುವ ಟೆಕ್ಕಿಗಳು, ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಶ್ರೀಮಂತರ ಮಕ್ಕಳಿಗೆ ನ್ಯೂ ಇಯರ್ ಸಂಭ್ರಮ ಎಂದರೆ ಬಾರ್ ಪಬ್ ಗಳಲ್ಲಿ ಕುಡಿದು ಕುಣಿಯೋದೇ ಆಗಿದೆ.ಇದು ಒಂಥರಾ ಫ್ಯಾಷನ್ ಆಗಿದೆ. ವರ್ಷದ ಕೊನೆಯ ದಿನ ಕತ್ತಲಾಗುತ್ತಿದ್ದಂತೆಯೇ ಬಾರ್, ಪಬ್ ಗಳು ಫುಲ್ ರಶ್ ಆಗುತ್ತವೆ. ನಗರಗಳ ಎಲ್ಲಾ ಬಾರ್ ಗಳು ಅಕ್ಷರಶಃ ಕುಡುಕ,ಕುಡುಕಿಯರಿಂದ ಅಕ್ಷರಶಃ ತುಂಬಿಹೋಗುತ್ತವೆ. ಸಾವಿರಾರು ಯುವಕ ಯುವತಿಯರು ಗಾಂಜಾ, ಮದ್ಯದ ಕಿಕ್ಕೇರಿಸಿ ತಮ್ಮ ಗೆಳೆಯ ಗೆಳತಿಯರು, ಪ್ರೇಯಸಿ, ಪ್ರಿಯತಮನ ಜೊತೆ ಬೀದಿಗಳಿಯುತ್ತಾರೆ.ಮಹಾನಗರಗಳ ಪೈಕಿ ರಾಜಧಾನಿ ಬೆಂಗಳೂರನ್ನು ತೆಗೆದುಕೊಂಡರೆ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್,ಕೋರಮಂಗಲ ರಸ್ತೆ  ಲಕ್ಷಾಂತರ ಜನರು ರಾತ್ರಿಯಿಡೀ ಕುಣಿಯುತ್ತಾರೆ. ಕೆಲವು ಯುವತಿಯರು ಮೈಮೇಲೆ ಪ್ರಜ್ಞೆ ಇಲ್ಲದಂತೆ ಅಶ್ಲೀಲ ಬಟ್ಟೆಗಳನ್ನು ಧರಿಸಿ ಕುಡಿದು ತೂರಾಡುತ್ತಾ ಕುಣಿಯೋದು ನೋಡಿದಾಗ ಇಂತಹ ಆಚರಣೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಸಾವಿರಾರು ಜನ ಓಡಾಡುವ ಸಾರ್ವಜನಿಕ ರಸ್ತೆಗಳನ್ನು ಕುಡಿದು ಕುಣಿದು ಸಂಭ್ರಮಾಚರಣೆಗೆ ಬಳಸಿ, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲು ಸರ್ಕಾರ ಯಾಕೆ ಅನುಮತಿ ನೀಡಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಬಾರ್, ವೈನ್ ಶಾಪ್, ಪಬ್ ಗಳಲ್ಲಿ ಕುಡಿದು ಮೋಜು ಮಸ್ತಿ ಮಾಡಿದ್ರೆ ಸಾರ್ವಜನಿಕರಿಗೆ ಸಮಸ್ಯೆಯಿಲ್ಲ, ಆದರೆ ಕುಡಿದು ಬೀದಿಗಿಳಿದು ಸಾರ್ವಜನಿಕ ರೋಡಿನಲ್ಲಿ ಕುಣಿಯೋದು ಸರಿಯಲ್ಲ. ಆದ್ದರಿಂದ ಸರ್ಕಾರ ರಸ್ತೆಗಳಲ್ಲಿ ಇಂತಹ ಆಚರಣೆಗಳನ್ನು ನಿಷೇಧಿಸಬೇಕು. ಒಂದುವೇಳೆ ಇಂತಹ ಮನೋರಂಜನೆ ಮಾಡಬೇಕಾದರೆ ಸಂಘಟಕರಿಗೆ ಸಾರ್ವಜನಿಕ ಮೈದಾನಗಳು ಅಥವಾ ನಿಗದಿತ ಸ್ಥಳಲಗಳಲ್ಲಿ ಅವಕಾಶ ಕೊಡಿ. ಆದರೆ ಸರ್ಕಾರವು ಮದ್ಯ ಮಾರಾಟದಿಂದ ಬರುವ ಕೋಟ್ಯಾಂತರ ರೂ ಆದಾಯಕ್ಕಾಗಿ ಕುಡಕರಿಗೆ ಸಾರ್ವಜನಿಕರ ರಸ್ತೆಗಳಲ್ಲಿ ಕುಣಿಯೋದಕ್ಕೆ ಅವಕಾಶ ನೀಡಬಾರದು. ಸರ್ಕಾರ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕಿದೆ.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *