ಹುಬ್ಬಳ್ಳಿ : ನಾವು ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ಕೊಡುತ್ತೇವೆ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ಸರಿ, ಇಲ್ಲವಾದಲ್ಲಿ ಹುಬ್ಬಳ್ಳಿ ಬಂದ್ ಮಾಡುವುದಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಜಿಹಾದಿ ಮುಸ್ಲಿಮರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರಿಗೇ ಕಲ್ಲಿನಿಂದ ಹೊಡೆದರು. ಪೊಲೀಸ್ ಜೀಪ್ ಪಲ್ಟಿ ಮಾಡಿದ್ದಲ್ಲದೇ ಅದರ ಮೇಲೆ ಹತ್ತಿ ಜಿಹಾದಿಗಳು ಘೋಷಣೆ ಕೂಗಿದ್ದರು. ಇಷ್ಟು ಸಾಲದೆಂಬAತೆ ಹನಮಂತ ದೇವಸ್ಥಾನಕ್ಕೆ ಹಾನಿಮಾಡಿದ್ದರು. ಮುಸ್ಲಿಂ ಜಿಹಾದಿಗಳೇ ನಿಮಗೆ ದೇವಸ್ಥಾನ ಏನು ಮಾಡಿತ್ತು? ಯಾಕೆ ದಾಳಿ ಮಾಡಿದ್ರಿ? ಧಮ್, ತಾಕತ್ ಇದ್ರೆ ಬನ್ನಿ ಇನ್ನೊಮ್ಮೆ ನಮ್ಮಗುಡಿ ಮುಟ್ಟಿ ನೋಡಿ ಹಿಂದೂಗಳ ತಾಕತ್ ಏನೆಂದು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ದೇವಸ್ಥಾನ ಒಡೆಯುವ ಜಿಹಾದಿ ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಡಬೇಕಿತ್ತು. ಆದರೆ ಸಿದ್ದರಾಮಯ್ಯನ ನೀಚ, ನಿರ್ಲಜ್ಜ ಸರ್ಕಾರ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ, ಹಿಂದೂ ದೇವಸ್ಥಾನಕ್ಕೆ ಹಾನಿಮಾಡಿದ ಜಿಹಾದಿಗಳ ಕೇಸ್ ವಾಪಸ್ ಪಡೆದಿದ್ದಾರೆ. ಏಯ್ ಸಿದ್ದರಾಮಯ್ಯ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದೀಯಾ? ರಾಜ್ಯದಲ್ಲಿ ಲಾಡೆನ್‌ಗಳನ್ನು ಬೆಳೆಸ್ತಾ ಇದ್ದೀಯಾ? ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಓಟ್ ಬ್ಯಾಂಕ್‌ಗಾಗಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಜಿಹಾದಿಗಳನ್ನೇ ರಕ್ಷಿಸಲು ಮುಂದಾಗಿದ್ದೀರಿ. ರಾಜ್ಯದ ಗೃಹಮಂತ್ರಿಗಳಾಗಿ ಭಯೋತ್ಪಾದಕರ ಪರವಾಗಿ ನಿಂತುಕೊಳ್ತಾ ಇದ್ದೀರಲ್ಲ? ಕೇವಲ ಮುಸ್ಲಿಂರಷ್ಟೇ ನಿಮಗೆ ಓಟ್ ಹಾಕಿದ್ರಾ? ಹಿಂದೂಗಳು ಓಟು ಹಾಕಿಲ್ವ? ಒಂದು ದಿನವಾದ್ರೂ ‘ಮುಸಲ್ಮಾನರೇ ಹಿಂದೂ ದೇವಸ್ಥಾನಗಳಿಗೆ, ಆಸ್ಪತ್ರೆಗೆ ಯಾಕೆ ಕಲ್ಲು ಹೊಡೆದ್ರಿ ಅಂತಾ ಕೇಳಿದ್ದೀಯಾ? ಪ್ರಶ್ನಿಸಲು ಬಾಯಿಲ್ವ? ನಾಲಗೆಗೆ ಲಕ್ವ ಹೊಡೆದಿದೆಯಾ? ಈಗ ಅವರನ್ನು ಬಿಡಿಸಲು ಓಡಾಡ್ತಾ ಇದ್ದೀಯಾ. ಆ ಮೂಲಕ ಗೃಹಮಂತ್ರಿಯಾಗಿ ರಾಜ್ಯದ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡ್ತಾ ಇದ್ದೀಯಾ? ನಾವು ಯಾವುದೇ ಕಾರಣಕ್ಕೂ ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಪ್ರತಿಭಟನೆಯ ಎಚ್ಚರಿಕೆ ನೀಡಿದರು.




























