ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಪತ್ನಿ ಹಾಗೂ ಅವಳ ಪ್ರಿಯಕರ ಸೇರಿ ಗಂಡನಿಗೆ ವಿಷಪ್ರಾಶನ ಮಾಡಿ ಹತ್ಯೆಗೆ ಯತ್ನಿಸಿ ಅದು ಫಲಿಸದಿದ್ದಾಗ ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣವು ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗವಾಗಿದ್ದು, ಕೊಲೆ ಪ್ರಕರಣಕ್ಕೆ ಬಲವಾದ ಸಾಕ್ಷ್ಯ ಲಭಿಸಿದೆ.
ಅಜೆಕಾರು ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಹತ್ಯೆಗೈದು ಬಳಿಕ ಇದು ಸಹಜ ಸಾವು ಎಂದು ನಾಟಕವಾಡಿದ್ದಳು. ಈ ಸಾವಿನ ಕುರಿತು ಮೃತ ಬಾಲಕೃಷ್ಣ ಪೂಜಾರಿಯವರ ತಂದೆ ಸಂಜೀವ ಪೂಜಾರಿ ಹಾಗೂ ಪತ್ನಿ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅಜೆಕಾರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಶವದ ಮರಣೋತ್ತರ ವರದಿ ಹಾಗೂ ಶವದ ಅಂಗಾAಗಗಳ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್ ಗೆ ರವಾನಿಸಿದ್ದರು. ಈ ಪೈಕಿ ಮಣಿಪಾಲ ಆಸ್ಪತ್ರೆಯಿಂದ ಶವದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದ್ದು, ಬಾಲಕೃಷ್ಣ ಪೂಜಾರಿ ಸಾವಿನ ಕುರಿತು ಆತನ ಸಂಬAಧಿಕರು ನೀಡಿರುವ ಸಂಶಯಾಸ್ಪದ ದೂರಿಗೆ ಹಾಗೂ ವೈದ್ಯಕೀಯ ವರದಿಗೆ ತಾಳೆಯಾಗುತ್ತಿದ್ದು, ಬಾಲಕೃಷ್ಣ ಪೂಜಾರಿಯವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಹಾಗೂ ಆ ಸಂದರ್ಭದಲ್ಲಿ ಮುಖದ ಮೇಲೆ ಗಾಯದ ಗುರುತುಗಳು ಮೂಡಿವೆ ಎಂದು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.ಮರಣೋತ್ತರ ವರದಿ ಆಧಾರಿಸಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಬಾಲಕೃಷ್ಣ ಪೂಜಾರಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗಳ ವೈದ್ಯಕೀಯ ವರದಿಗಳೇ ಈ ಪ್ರಕರಣದಲ್ಲಿ ನಿರ್ಣಾಯಕ?
ಬಾಲಕೃಷ್ಣ ಪೂಜಾರಿ ಆರೋಗ್ಯ ಹದಗೆಡುತ್ತಿರುವ ಸಂದರ್ಭದಲ್ಲಿ ಪತ್ನಿ ಪ್ರತಿಮಾ ಗಂಡನಿಗೆ ಚಿಕಿತ್ಸೆ ನೀಡಲು ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದಾಳೆ. ಆದರೆ ಚಿಕಿತ್ಸೆ ನೀಡಿದ್ದ ಮಾಹಿತಿ ಅಥವಾ ವೈದ್ಯರ ಸಲಹೆ ಕುರಿತು ಕಟುಂಬದ ಸದಸ್ಯರಲ್ಲಿ ಬಹಿರಂಗಪಡಿಸಿಲ್ಲ ಎಂದು ಆಕೆ ಅಣ್ಣ ಸಂದೀಪ್ ಹಾಗೂ ಬಾಲಕೃಷ್ಣ ಪೂಜಾರಿ ಕುಟುಂಬದವರು ಆರೋಪಿಸಿದ್ದಾರೆ. ಪ್ರತಿಮಾ ತನ್ನ ಗಂಡನಿಗೆ ನೀಡುತ್ತಿದ್ದ ಚಿಕಿತ್ಸೆಯ ಮಾಹಿತಿ ಯಾಕೆ ಬಚ್ಚಿಟ್ಟಿದ್ದಳು ಎನ್ನುವುದು ಕುಟುಂಬ ಸದಸ್ಯರ ಸಂಶಯಕ್ಕೆ ಕಾರಣವಾಗಿದೆ. ಬಾಲಕೃಷ್ಣ ಚಿಕಿತ್ಸೆ ಪಡೆದಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ ಮಹತ್ವದ ಸಾಕ್ಷ್ಯಗಳು ಲಭಿಸುವ ಸಾಧ್ಯತೆಗಳಿವೆ. ಅಲ್ಲದೇ ಈ ಪ್ರಕರಣದಲ್ಲಿ ನಿರ್ಣಾಯಕವಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಕುಟುಂಬದ ಸದಸ್ಯರು ಆರೋಪಿಸಿರುವ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಪೂರಕವಾಗಿ ಮರನೋತ್ತರ ವರದಿಯು ಕೂಡ ತಾಳೆಯಾಗಿದ್ದು, ಕೊಲೆ ಸಂಕೆ ಮತ್ತಷ್ಟು ಬಲವಾಗಿದ್ದು, ಆರೋಪಿಗಳಿಗೆ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ.