ಕಾರ್ಕಳ: ಕಾರ್ಕಳ ತಾಲೂಕು ಈದು ಗ್ರಾಮದ ಜಂಗೊಟ್ಟು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈದು ಜಂಗೊಟ್ಟು ನಿವಾಸಿ ಗಣೇಶ್(33ವ) ಆತ್ಮಹತ್ಯೆ ಮಾಡಿಕೊಂಡವರು. ಗಣೇಶ್ ವಿವಾಹಿತರಾಗಿದ್ದು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಎರಡು ಮೂರು ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದ ಅವರು ವಿಪರೀತ ಕುಡಿದು ಬಂದು ಮನೆಯ ಹೊರಗೆ ಜಗುಲಿಯಲ್ಲಿ ಮಲಗುತ್ತಿದ್ದರು. ಅಲ್ಲದೆ ಇವರಿಗೆ ಕೆಲವು ವರ್ಷಗಳಿಂದ ಮೂರ್ಚೆ ರೋಗ ಖಾಯಿಲೆ ಕೂಡಾ ಇದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಅದರಂತೆ ಆಗಸ್ಟ್.15 ರಂದು ಜಂಗೊಟ್ಟುವಿನ ಮನೆಗೆ ಮನೆಗೆ ರಾತ್ರಿ ಮದ್ಯ ಸೇವಿಸಿಕೊಂಡು ಬಂದವರು ಮನೆಯ ಜಗುಲಿಯಲ್ಲಿ ಕುಳಿತುಕೊಂಡಿದ್ದು, ಮನೆಯವರು ಹೇಳಿದ ನಂತರ ಮಲಗಲು ತೆರಳಿರುತ್ತಾರೆ. ಆದರೆ ಆ.16ರಂದು ಬೆಳಿಗ್ಗೆ ನೋಡಿದಾಗ ಮನೆಯ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ವಿಪರೀತ ಮದ್ಯ ಸೇವನೆಯಿಂದ ಹಾಗೂ ಮೂರ್ಚೆ ರೋಗದ ಖಾಯಿಲೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























`
