ಕಾರ್ಕಳ : ಪಶ್ಚಿಮಘಟ್ಟದ ದಟ್ಟ ಕಾನನದ ತಪ್ಪಲಿನ ಪುಟ್ಟ ಸುಗ್ರಾಮ ನಾರಾವಿಯಲ್ಲಿ ಡಿ.22 ರಂದು ನಡೆಯಲಿರುವ ಮಹಾ ಚಂಡಿಕಾ ಯಾಗ ದ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಖ್ಯಾತ ಉದ್ಯಮಿ ಹಿಂದೂ ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಜನ ಸ್ನೇಹಿ ಬಡವರ ಬಂಧು ಪ್ರಖ್ಯಾತ ವೈದ್ಯರಾದ ಡಾ. ಪ್ರಸಾದ್ ಬಿ. ವಿಜಯ ಕ್ಲಿನಿಕ್ ಇವರ ಗಣ್ಯ ಉಪಸ್ಥಿತಿಯಲ್ಲಿ ಅ.13 ರಂದು ಶ್ರೀ ಸೂರ್ಯನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಊರು ಪರವೂರುಗಳಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೌರವಾನ್ವಿತ ಗಣ್ಯರಾಗಿರುವ ಶ್ರೀ ಸೂರ್ಯ ಪ್ರೆಂಡ್ಸ್, ನಾರಾವಿ ಇದರ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ, ಹೊಸ್ಮಾರು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಸುನಿಲ್ ಪೂಜಾರಿ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಮಂಜುನಗರ ಮಹಮ್ಮಾಯಿ ಪ್ರೆಂಡ್ಸ್ ನಮ್ಮ ಜವನೇರ್ ಅಧ್ಯಕ್ಷರಾದ ಚೆಲುವ ರಾಜ್, ಹೊಸ್ಮಾರ್ ಪ್ರೆಂಡ್ಸ್ ಅಧ್ಯಕ್ಷರಾದ ಪ್ರಮೋದ್ ಕುಲಾಲ್, ಆದಿತ್ಯ ಪ್ರೆಂಡ್ಸ್ ಕೂತ್ಲೂರು ಅಧ್ಯಕ್ಷರಾದ ಪ್ರಜ್ಞೇಶ್ ಪೂಜಾರಿ, ಶ್ರೀ. ಕ್ಷೆ. ಧ. ಗ್ರಾ. ಯೊ. ಹೊಸ್ಮಾರ್ ವಲಯ ಮೇಲ್ವಿಚಾರಕರಾದ ಮನೋಜ್ ಹೆಗ್ಡೆ, ವಿವೇಕಾನಂದ ಘಟಕ ಬನ್ನಡ್ಕ ಅಧ್ಯಕ್ಷರಾದ ಪೂವಪ್ಪ ಪೂಜಾರಿ, ಕುಂಭಕಂಠಿಣಿ ಸ್ಪೋರ್ಟ್ಸ್ ಕ್ಲಬ್ ಕೂತ್ಲೂರು ಅಧ್ಯಕ್ಷರಾದ ಮಧುಸೂದನ್ , ಶ್ರೀ ಮುಕಾಂಬಿಕಾ ಯುವಕ ಮಂಡಲ ಈದು ಅಧ್ಯಕ್ಷರಾದ ಯೋಗೀಶ್ ಪೂಜಾರಿ,
ಕೆ. ಕೆ. ಪ್ರೆಂಡ್ಸ್ ನೂರಾಳ್ ಬೆಟ್ಟು ಅಧ್ಯಕ್ಷರಾದ ಸೂರಜ್ ಜೈನ್, ಮಹಮ್ಮಾಯಿ ಪ್ರೆಂಡ್ಸ್ ಪೊಸರಡ್ಕ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ಮಂಜುಶ್ರೀ ಕಲಾವೃಂದ ಗುಮ್ಮೆತ್ತು ಅಧ್ಯಕ್ಷರಾದ ಯಶೋಧರ ಪೂಜಾರಿ,
ಬೊಟ್ಟು ಜವನೇರ್ ನಾರಾವಿ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಭಗತ್ ಸಿಂಗ್ ಘಟಕ ಈದು ಅಧ್ಯಕ್ಷರಾದ ದಿನೇಶ್ ಪೂಜಾರಿ ಸಂಪಿಗೆದಡಿ, ಆದಿಶಕ್ತಿ ಪ್ರೆಂಡ್ಸ್ ಕ್ಲಬ್ ಪಲಾರಗೋಳಿ ಅಧ್ಯಕ್ಷರಾದ ಹರಿಶ್ಚಂದ್ರ ಸಾಲಿಯಾನ್,
ಶ್ರೀ ಗುರು ಪ್ರೆಂಡ್ಸ್ ಕ್ಲಬ್ ಪೆಜತ್ತಕಟ್ಟೆ ಅಧ್ಯಕ್ಷರಾದ ಉಮೇಶ್ ಸಾಲಿಯಾನ್ ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.