
ಕಾರ್ಕಳ, ಡಿ.18: ನಾಳೆ (ಡಿ.19) 33ಕೆವಿ ಲೈನ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು, ಮಿಯ್ಯಾರ್ ಫೀಡರ್ ಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.
ಆದ್ದರಿಂದ ಕಾರ್ಕಳ ತಾಲೂಕಿನ ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು. ಜೋಡುಕಟ್ಟೆ, ಕುಂಟಿಬೈಲು, ರೆಂಜಾಳ, ಬೋರ್ಕಟ್ಟೆ, ಕಾಜರಬೈಲು, ಅಡ್ಕರಪಲ್ಕೆ, ನೆಲ್ಲಿಗುಡ್ಡೆ, ಮಂಜಡ್ಕ, ಮಿಯ್ಯಾರು ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಇದನ್ನು ಗಮನಿಸಿ ಮೆಸ್ಕಾಂ ನೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
.
.
