
ಕಾರ್ಕಳ: ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷಾವಧಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭ ದೇವರಾಧನೆ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ, ದೇವಳಕ್ಕೆ ಸುಮಾರು 55 ವರ್ಷಗಳಿಂದ ದೇವರು ಹೊರುವ ಬಲಿ ಸೇವೆಯನ್ನು ನೀಡುತ್ತಿರುವ ಶ್ರೀಧರ್ ಭಟ್ ಇವರನ್ನು ದೇವಳದ ಆಡಳಿತ ಮಂಡಳಿಯ ವತಿಯಿಂದ ಭಕ್ತಿ ಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿರವರದ ಶ್ರೀ ಸುಬ್ರಹ್ಮಣ್ಯ ತಂತ್ರಿ. ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್. ಮೊಕ್ತೇಸರರಾದ ಗಣೇಶ್ ರಾವ್ ಸುಧೀಂದ್ರರಾವ್ ರಾಮಚಂದ್ರರಾವ ದಯಾನಂದರಾವ್ . ಸೇವಾ ಸಮಿತಿಯ ಸಂಚಾಲಕರಾದ ವೀರೇಂದ್ರ ರಾವ್ ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು.

