ಕಾರ್ಕಳ ಸೆ 19:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿAದ ರಾಜಕೀಯ ಬೇಳೆಬೇಯಿಸಿಕೊಳ್ಳಲು ಪರಶುರಾಮ ಥೀಂಪಾರ್ಕ್ ಕಾಮಗಾರಿ ಕಳಪೆ ಎಂದು ಪದೇಪದೇ ಸುಳ್ಳುಹೇಳಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮಾಡುತ್ತಿರುವ ಉದಯ್ ಕುಮಾರ್ ಶೆಟ್ಟಿಯರು ಕಳಪೆ ಕಾಮಗಾರಿಯ ಸರದಾರ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಹೇಳಿದ್ದಾರೆ. ಪರಶುರಾಮನ ಮೂರ್ತಿ ರಚನೆಕಾರ ಶಿಲ್ಪಿ ಜಿಎಸ್‌ಟಿ ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ನಿಮ್ಮ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದು, ಇಂತಹ ಕುಖ್ಯಾತಿ ಹೊಂದಿರುವ ನೀವು ಮತ್ತೆ ಸರ್ಕಾರದ ಕಾಮಗಾರಿಗಳನ್ನು ಮಾಡಬಹುದೇ? ಈ ರಾಜ್ಯದಲ್ಲಿ ಕೃಷ್ಣ ನಾಯ್ಕ್ ಅವರಿಗೆ ಒಂದು ಕಾನೂನು, ನಿಮಗೊಂದು ಕಾನೂನು ಇದೆಯೆ? ಎಂದು ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಪರಶುರಾಮನ ಮೂರ್ತಿಯ ಮೇಲ್ಭಾಗವನ್ನು ಕದ್ದುಮುಚ್ಚಿ ಕೊಂಡೊಯ್ಯಲಾಗಿದೆ ಎಂದು ಯಾಕೆ ಜನರಿಗೆ ಪದೇಪದೇ ಸುಳ್ಳುಹೇಳುತ್ತೀರಿ? ಮೂರ್ತಿಯ ಭಾಗವನ್ನು ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆಗೆಯಲಾಗಿದ್ದು ನಿಮಗೂ ಗೊತ್ತಿದೆ. ಈ ಕುರಿತು ಹೈಕೋರ್ಟಿನಲ್ಲಿ ಚರ್ಚೆಯಾಗಿದೆ. ಆದರೂ ಕೂಡ ನೀವು ಮೂರ್ತಿ ಕಳವಾಗಿದೆ ಎಂದು ಹಸಿಹಸಿ ಸುಳ್ಳುಹೇಳುತ್ತೀರಿ.ಮೂರ್ತಿಪ್ಲಾಸ್ಟಿಕ್-ಫೈಬರ್ ಎಂದು ಊರೆಲ್ಲಾ ಹೇಳಿದ ನೀವು ಹೈಕೋರ್ಟಿನಲ್ಲಿ ಫೈಬರ್ ಮೂರ್ತಿಯಲ್ಲ ಎಂದು ಒಪ್ಪಿಕೊಂಡಿದ್ದು, ಈಗ ನಿಮಗೆÀ ಹಸಿಸುಳ್ಳುಹೇಳಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶಾಸಕ ವಿಸುನಿಲ್ ಕುಮಾರ್ ರವರು ತನ್ನ ಶಾಸಕತ್ವದ ಅವಧಿಯಲ್ಲಿ ರಾಜ್ಯದಲ್ಲಿ ತನ್ನ ಸರ್ಕಾರಇರಲಿ, ಇಲ್ಲದಿರಲಿ ಕಾರ್ಕಳವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕೇವಲ ರಸ್ತೆ ಕಾಮಗಾರಿಗಳಿಗೆ ಸೀಮಿತವಾಗದೇ, ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಕಳ ಅಭಿವೃದ್ಧಿ ಆಗುವಂತೆನೋಡಿಕೊAಡವರು. ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಉದ್ಯಮ, ಪ್ರವಾಸೋದ್ಯಮ, ರಸ್ತೆ, ಸೇತುವೆ, ನೀರಾವರಿ ಅಷ್ಟೇಅಲ್ಲದೇ, ಸರ್ಕಾರದ ಅನುದಾನವನ್ನು ಅವಲಂಬಿಸದೇ, ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಹಲವಾರು ಕೆರೆಗಳ ಅಭಿವೃದ್ಧಿ, ಉದ್ಯೋಗಮೇಳ, ಕೋವಿಡ್ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರ ಸೇರಿದಂತೆ ಹತ್ತುಹಲವು ಅಭಿವೃದ್ಧಿ ಹಾಗೂ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದವರು. ಇದೆಲ್ಲವನ್ನೂಕಣ್ಣಾರೆ ನೋಡಿಯೂ ಕಾರ್ಕಳದಲ್ಲಿ ಅಭಿವೃದ್ಧಿಯೇ ಆಗಿಲ್ಲ, ಕಾರ್ಕಳಕ್ಕೆ ಸುನಿಲ್ ಕುಮಾರ್ ಕೊಡುಗೆ ಏನೂ ಇಲ್ಲ ಎನ್ನುವ ನೀವು ಚುನಾವಣೆ ಸಂದರ್ಭದಲ್ಲಿ ಓಡಾಡಿದರೆ ಏನು ಪ್ರಯೋಜನ ಎಂದು ಮಹಾವೀರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
in