Share this news

ಉಡುಪಿ: ಈ ಬಾರಿಯ “ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರು ಆಯ್ಕೆಯಾಗಿದ್ದು, ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರಸ್ವತಿ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮರೂರು ಕುಂದಾಪುರ), ವಸುಂಧರ (ಸಹ ಶಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಬೊಮ್ಮಾರಬೆಟ್ಟು), ಹರೀಶ್ ಪೂಜಾರಿ (ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಕಾರ್ಕಳ ತಾಲೂಕು), ಸುಮಂಗಲಾ ಗಾಣಿಗ (ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿಸ್ಮತಿ ಬೈಂದೂರು ವಲಯ) ವಿಜಯ ಎ (ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೆರೆ ಅಚ್ಲಾಡಿ ಬ್ರಹ್ಮಾವರ ವಲಯ) ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೇಖರ ಕುಮಾರ (ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ಕುಂದಾಪುರ), ವೀಣಾ (ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಬ್ರಹ್ಮಾವರ ತಾಲೂಕು), ರಮಣಿ (ಮುಖ್ಯ ಶಿಕ್ಷಕರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು), ತಿಮ್ಮಪ್ಪ ಗಾಣಿಗ (ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನು ಬೈಂದೂರು ವಲಯ), ಹೆಚ್ ಪ್ರಭಾವತಿ (ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ) ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಶಶಿಶಂಕರ್ ಹೆಚ್ ಎಂ (ಸಹಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ), ಎ ನಟರಾಜ ಉಪಾಧ್ಯ (ಚಿತ್ರಕಲಾ ಶಿಕ್ಷಕರು ಎಸ್ ವಿ ಹೆಚ್ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇನ್ನಂಜೆ), ಜಗದೀಶ ಕೆ (ದೈಹಿಕ ಶಿಕ್ಷಣ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ), ಸಂತೋಷ (ಸಹಶಿಕ್ಷಕರು ರಾಯ್ಸನ್ ಸರ್ಕಾರಿ ಪ್ರೌಢ ಶಾಲೆ ಕಂಡೂರು ಕುಂದಾಪುರ ತಾಲೂಕು) ಜಗದೀಶ ಶೆಟ್ಟಿ (ಸಹಶಿಕ್ಷಕರು ಜನತಾಪ್ರೌಢ ಶಾಲೆ, ಹೆಮ್ಮಾಡಿ ಬೈಂದೂರು ವಲಯ) ಆಯ್ಕೆಯಾಗಿದ್ದಾರೆ.

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *