
ನವದೆಹಲಿ, ಡಿ.12 : ದೇಶದಾದ್ಯಂತ ಜನಗಣತಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೇಶದಾದ್ಯಂತ ಒಟ್ಟು ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮೊದಲ ಹಂತವು 2026ರ ಏಪ್ರಿಲ್’ನಿಂದ ಸೆಪ್ಟೆಂಬರ್’ರವರೆಗೆ ನಡೆಯಲಿದ್ದು, ಎರಡನೇ ಹಂತವು ಫೆಬ್ರವರಿ 2027ರಲ್ಲಿ ಮುಕ್ತಾಯಗೊಳ್ಳಲಿದೆ.
ಈÀ ಜನಗಣತಿಯು ದೇಶದ ಮೊದಲ ಡಿಜಿಟಲ್ ಜನಗಣತಿಯಾಗಲಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಘೋಷಿಸಿದರು. ಜನಗಣತಿಗಾಗಿ 11,718 ಕೋ.ರೂ ಬಜೆಟ್ ಅನ್ನು ಅನುಮೋದಿಸಿದೆ. ಮುಂಬರುವ ಜನಗಣತಿಯಲ್ಲಿ ಗಮನಾರ್ಹ ಬದಲಾವಣೆಯೆಂದರೆ ಅದು ಜಾತಿ ಆಧಾರಿತ ಜನಗಣತಿಯನ್ನು ಒಳಗೊಂಡಿರುತ್ತದೆ.
.
.
