
ನವದೆಹಲಿ,ನ.24: ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಅವರು ಇಂದು (ನವೆಂಬರ್ 24) ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ.
ಧರ್ಮೇಂದ್ರ ಅವರ ಧರಮ್ ಸಿಂಗ್ ಡಿಯೋಲ್ ಆಗಿ 1935ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಪಂಜಾಬ್ನ ಸಣ್ಣ ನಗರದಿಂದ ಬಂದ ಅವರು, ಚಿತ್ರರಂಗದ ಅತ್ಯಂತ ಪ್ರೀತಿಯ ಹೀರೋ ಆದರು. 1950ರ ಸಂದರ್ಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ತಲ್ಲಣಗಳು ಎದ್ದಿದ್ದವು. 1960ರ ವೇಳೆಗೆ ಚಿತ್ರರಂಗಕ್ಕೆ ಬಂದ ಅವರು, ಹೊಸ ಬದಲಾವಣೆಗೆ ಸಾಕ್ಷಿ ಆದರು.
ಹಲವು ವರ್ಷಗಳ ಕಾಲ ಹೀರೋ ಆಗಿ ನಟಿಸಿದ ಧರ್ಮೇಂದ್ರ ನಂತರ ಹಿಂದಕ್ಕೆ ಸರಿದರು. 2012ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ ನೀಡಿ ಗೌರವಿಸಿದೆ.
