Share this news

ಹೆಬ್ರಿ: ಕ್ರೀಡೆಯಲ್ಲಿ ಸಾಧನೆಯನ್ನು ಮಾಡುವ ಹಂಬಲವನ್ನು ಬೆಳೆಸಿಕೊಳ್ಳಿ. ಅಮೃತ ಭಾರತಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಬೆಳವಣಿಗೆಗೆ ಪೂರಕವಾದ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ನೀಡುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತಿದೆ ಎಂದು ಕ್ರೀಡಾಪಟು ಪ್ರಶಾಂತ ಪೈ ಮುದ್ರಾಡಿ ನುಡಿದರು.
ಅವರು ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಆಗಸ್ಟ್ 17 ರಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ 17ನೇ ವರ್ಷದ ಕ್ರೀಡಾಕೂಟದಲ್ಲಿ ಕ್ರೀಡಾಕೂಟದ ಪಥಸಂಚಲನೆಯ ಗೌರವ ವಂದನೆಯನ್ನು ಸ್ವೀಕರಿಸಿ , ಕ್ರೀಡಾಜ್ಯೋತಿಯನ್ನು ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ ಕ್ರೀಡಾಕೂಟದ ಧ್ವಜಾರೋಹಣಗೈದರು .
ಅಮೃತ ಭಾರತಿ ಟ್ರಸ್ಟನ ಕಾರ್ಯದರ್ಶಿ ಗುರುದಾಸ್ ಶೆಣೈ, ಅಮೃತ ಭಾರತಿ ವಸತಿ ನಿಲಯದ ಗೌರವಾಧ್ಯಕ್ಷ ಯೋಗೀಶ್ ಭಟ್, ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಟ್ರಸ್ಟ್ ನ ಸದಸ್ಯರಾದ ಬಾಲಕೃಷ್ಣ ಮಲ್ಯ, ಲಕ್ಷ್ಮಣ ಭಟ್ ಶಿವಪುರ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕ್ರೀಡಕೂಟ ಪ್ರಮುಖ್ ಶ್ರೀಮತಿ ಉಷಾ ಶೆಟ್ಟಿ ಸಿದ್ದಾಪುರ, ಅಮೃತ ಭಾರತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣ ಆಚಾರ್, ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಎಚ್. ವೈ . ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತವಿಕ ಮಾತುಗಳನ್ನಾಡಿದರು .
ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು .

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಮೃತ ಭಾರತಿ ಆಡಳಿತ ಮಂಡಳಿಯ ಅಧ್ಯಕ್ಷ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣವನ್ನು ಮಾಡಿದರು.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಸಮಗ್ರ ಪ್ರಶಸ್ತಿ ಅಮೃತ ಭಾರತಿ ವಿದ್ಯಾಲಯ ಪಡೆಯಿತು.
ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಆಗಸ್ಟ್ 31 ಮತ್ತು ಸೆ. 1 2 ರಂದು ಮತ್ತು ನಡೆಯುವ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ .ವಿದ್ಯಾಭಾರತಿ ಕರ್ನಾಟಕ ಪ್ರಾಂತವು ರಾಜ್ಯಮಟ್ಟದ ಸ್ಪರ್ಧೆಯನ್ನು ಬೀದರ್ ಜಿಲ್ಲೆಯಲ್ಲಿ ಆಯೋಜಿಸಿದೆ .
ಅಕ್ಷತಾ ಮಾತಾಜಿ ಸ್ವಾಗತಿಸಿ, ನಿಶಾನ್ ಗುರೂಜಿ ವಂದಿಸಿದರು. ಪಂಚಮಿ ಮಾತಾಜಿ ನಿರೂಪಿಸಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಿಂದ ಒಟ್ಟು 307 ವಿದ್ಯಾರ್ಥಿಗಳು 168 ಶಿಕ್ಷಕರು ವಿದ್ಯಾ ಭಾರತಿಯಿಂದ ಮತ್ತು ಸಂಸ್ಥೆಯಿಂದ ಒಟ್ಟು 15 ಸದಸ್ಯರು ಭಾಗವಹಿಸಿದ್ದರು. ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ,ಸರಸ್ವತಿ ವಿದ್ಯಾಲಯ ಸಿದ್ದಾಪುರ , ನಚಿಕೇತ ವಿದ್ಯಾಲಯ ಬೈಲೂರು ,ಅಮೃತ ಭಾರತಿ ಹೈಸ್ಕೂಲು ವಿಭಾಗ ಹೆಬ್ರಿ ,ಅಮೃತ ಭಾರತಿ ಪ್ರಾಥಮಿಕ ವಿಭಾಗ ಹೆಬ್ರಿ,ಅಮೃತ ಭಾರತಿ ವಿದ್ಯಾ ಕೇಂದ್ರ ಪ್ರಾಥಮಿಕ ವಿಭಾಗ ಹೆಬ್ರಿ, ಅಮೃತ ಭಾರತಿ ವಿದ್ಯಾ ಕೇಂದ್ರ ಹೈಸ್ಕೂಲ್ ವಿಭಾಗ ಹೆಬ್ರಿ, ಶ್ರೀರಾಮ ವಿದ್ಯಾಕೇಂದ್ರ ಕೋಡಿ, ಆರ್ ಕೆ ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿ, ರೂರಲ್ ಎಜುಕೇಶನ್ ಸೊಸೈಟಿ ಪಟ್ಲ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು .

                        

                          

                        

                          

 

`

Leave a Reply

Your email address will not be published. Required fields are marked *