
ಪಾಟ್ನಾ, ನ.14: ತೀವೃ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ 190ಕ್ಕೂ ಅಧಿಕ ಸ್ಥಾನಗಳಲ್ಲಿ ಭಾರೀ ಮುನ್ನಡೆ ಸಾಧಿಸುವ ಮೂಲಕ ಮತ್ತೊಮ್ಮೆ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ.
ಇತ್ತ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ್ ಈ ಫಲಿತಾಂಶದಲ್ಲಿ ಧೂಳೀಪಟವಾಗಿದೆ. ಈ ಪೈಕಿ 125 ವರ್ಷ ಇತಿಹಾಸವಿರುವ ರಾಷ್ಟಿçÃಯ ಪಕ್ಷ ಕಾಂಗ್ರೆಸ್ ಒಂದAಕಿ ಕೂಡ ತಲುಪಲು ಹೆಣಗಾಡುವ ಸ್ಥಿತಿ ಎದುರಾಗಿದ್ದು, ಈ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವೃ ಮುಖಭಂಗವಾಗಿದೆ.
ಬಿಜೆಪಿ ಮತಗಳ್ಳತನ ಮಾಡುತ್ತಿದೆ, ಇವಿಎಂ ಹ್ಯಾಕ್ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಮಹಾ ಅಭಿಯಾನವನ್ನೇ ಮಾಡಿತ್ತು. ಮಾತ್ರವಲ್ಲದೇ ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವು ಕೂಡ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

