ಕಾರ್ಕಳ : ತಾಲೂಕಿನ ನೀರೆ ಗ್ರಾಮದ ಬನಶಂಕರಿ ಸಂಜೀವಿನಿ ಒಕ್ಕೂಟ ಸಂಘದ 3ನೇ ವಾರ್ಷಿಕ ಮಹಾಸಭೆಯು ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜರುಗಿತು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಕ್ರಂ ಹೆಗ್ಡೆ ಮಾತನಾಡಿ, ಒಕ್ಕೂಟದಿಂದ ಮಹಿಳೆಯರುವಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಲಂಬಿಗಳಗಬಹುದು ಎಂದರು.
ಕೆನರಾ ಬ್ಯಾಂಕ್ ನ ಸಿಬ್ಬಂದಿ ಪ್ರದೀಪ್ PMJJY ,PMSBY ಯೋಜನೆ ಹಾಗೂ ಇತರೆ ಜೀವವಿಮೆ ಬಗ್ಗೆ ಮಾಹಿತಿ ನೀಡಿದರು.ಬನಶಂಕರಿ ಸಂಘದ ಅಧ್ಯಕ್ಷರಾದ ವಾಣಿ ಶೆಟ್ಟಿ ಸಂಜೀವಿನಿ ಸಂಘದ ಮಹಿಳೆಯರ ಸಾಧನೆಯನ್ನು ಹಾಗೂ ಇನ್ನಷ್ಟು ಹುರುಪಿನೊಂದಿಗೆ ಮಹಿಳೆಯರು ಕೆಲಸ ಮಾಡಿ ಸಾಮಾಜಿಕವಾಗಿ ಆರ್ಥಿಕವಾಗಿ ಸದೃದರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ SSLC ಹಾಗೂ PUC ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ನೀರೆ ಕಣಂಜಾರು ಗ್ರಾಮದ ವಿದ್ಯಾರ್ಥಿಗಳು, ಸಂಜೀವಿನಿ ಸಂಘದ ಸ್ವ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ ಮಹಿಳೆಯರಿಗೆ ಹಾಗೂ ಸಂಘದ ವಿಕಲಚೇತನ ಸದಸ್ಯ ಸುಕೇಶ್ ರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ನಡವಳಿಯನ್ನು ಕಾತ್ಯಾಯಿನಿ MBK ವಾಚಿಸಿದರು. LCRP ಪ್ರಮೀಳಾ ಶೆಟ್ಟಿ ಸಭೆಯ ಕರೆಯೋಲೆ ವಾಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ, ನೀರೆ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಪಂಚಾಯತ್ ಸದಸ್ಯರುಗಳು, ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು .
ಸುನೀತ ಶೆಟ್ಟಿ LCRP ಸ್ವಾಗತಿಸಿ,ಮಮತಾ LCRP ವಂದಿಸಿದರು.ನೀರೆ ಪಂಚಾಯತ್ ಸಿಬ್ಬಂದಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.