ಕಾರ್ಕಳ, ಆ08: ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆಯ ನಡೆಯುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಪಾವಿತ್ರ್ಯತೆ ಹಾಗೂ ನಂಬಿಕೆಗೆ ಘಾಸಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪೊಲೀಸರ ತನಿಖೆಯ ನಡುವೆ
ಧರ್ಮ ಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುಟ್ಯೂಬರ್ ಗಳನ್ನು SDPI ಕಾರ್ಯಕರ್ತರು ಭೇಟಿ ಮಾಡಿದ್ದಾರೆ.ಹಾಗಾದರೆ ಧರ್ಮಸ್ಥಳ ಹೋರಾಟಗಾರರಿಗೂ, SDPIಗೂ ಏನು ಸಂಬಂಧ ? ಏನಿದರ ಒಳ ಮರ್ಮ ? ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಈ ಹೋರಾಟದಲ್ಲಿ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಡಪಂಥೀಯರು, ನಗರ ನಕ್ಸಲರು, SDPI, ಜಿಹಾದಿ ಗ್ಯಾಂಗ್ , ಕಾನೂನು ಕೈಗೆತ್ತಿಕೊಳ್ಳುವವರೇ ತುಂಬಿ ಹೋಗಿದ್ದಾರೆ. ಇವರೆಲ್ಲರ ಉದ್ದೇಶ ಹಿಂದುತ್ವ, ಹಿಂದೂ ಧಾರ್ಮಿಕ ನಂಬಿಕೆಗಳ ವಿರುದ್ಧ ದಾಳಿ ನಡೆಸುವುದು ಹಾಗೂ ಈ ಇದು ಟೂಲ್ ಕಿಟ್ ಹೋರಾಟದ ಮುಂದುವರಿದ ಭಾಗವೇ ಟಾರ್ಗೆಟ್ ಧರ್ಮಸ್ಥಳ ಆಗಿದೆ ಹಾಗೂ ಕಾಡಿನಲ್ಲಿದ್ದ ನಕ್ಸಲರನ್ನು ಸಿಎಂ ಸಿದ್ದರಾಮಯ್ಯನವರು ನಾಡಿಗೆ ತಂದು ಬಿಟ್ಟಿದ್ದರ ಫಲವಾಗಿ ಈ ದಾಂಧಲೆ ಸೃಷ್ಟಿಯಾಗಿದೆ ಎಂದು ಸುನಿಲ್ ಆರೋಪಿಸಿದ್ದಾರೆ.