ಕಾರ್ಕಳ: ಯಕ್ಷದೇಗುಲ ಕಾಂತಾವರದ ಇಪ್ಪತ್ತರಡನೇ ವರ್ಷದ ಯಕ್ಷೋಲ್ಲಾಸ ಕಾರ್ಯಕ್ರಮವು ಜುಲೈ 21 ರಂದು ಬೆಳಿಗ್ಯೆ 10 ರಿಂದ ಹನ್ನೆರಡು ತಾಸಿನ ಆಟ,ಕೂಟ,ಬಯಲಾಟವು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಲಿದ್ದು, ಗ್ರಾ.ಪಂ ಅದ್ಯಕ್ಷ ರಾಜೇಶ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಬಾರಾಡಿ ಬೀಡು ಸುಮತಿ ಆರ್ ಬಲ್ಲಾಳ್ ರವರು ಯಕ್ಷೋಲ್ಲಾಸ ಉದ್ಘಾಟನೆ ಮಾಡಿ ಶುಭಾಶಂಸನೆಗೈಯಲಿದ್ದಾರೆ. ನಂತರ ಪ್ರಸಿದ್ಧ ಕಲಾವಿದರಿಂದ ವಿಶ್ವಾಮಿತ್ರ ಮೇನಕೆ ಆಟ ಜರಗಲಿದೆ ಎಂದು ಯಕ್ಷದೇಗುಲ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ ತಿಳಿಸಿದ್ದಾರೆ.
ಮಧ್ಯಾಹ್ನ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳರವರ ಅಧ್ಯಕ್ಷತೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಗೌರವ ಉಪಸ್ಥಿತಿಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ಕಲಾವಿರಾದ ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ರಿಗೆ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡರಿಗೆ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಲಾಗುವುದು.
ಉಜಿರೆ ಅಶೋಕ ಭಟ್ ಮತ್ತು ಮೂಡಬಿದ್ರಿ ಶಾಂತಾರಾಮ ಕುಡ್ವಾ ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಾಧವ ಎಂ.ಕೆ ,ಕರ್ಣಾಟಕ ಬ್ಯಾಂಕ್ ನ ನಿವೃತ್ತ ಜ.ಮೇನೇಜರ್ ಬಿ .ಚಂದ್ರಶೇಖರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಡಾ. ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್ ವಾದಿರಾಜ ಕಲ್ಲೂರಾಯ, ಸುಭ್ರಹ್ಮಣ್ಯ ಬೈಪಡಿತ್ತಾಯ ರವಿಚಂದ್ರ ಕನ್ನಡಿಕಟ್ಟೆ, ಚಂದ್ರಶೇಖರ ಭಟ್ ಕೊಂಕಣಾಜೆ, ಬೆಳುವಾಯಿ ದೇವಾನಂದ್ ಭಟ್ ಮುಂತಾದ ಖ್ಯಾತ ಕಲಾವಿದರಿಂದ ಕರ್ಣಾವಸಾನ ತಾಳಮದ್ದಳೆ ಕೂಟ ಮತ್ತು ಕಾಂತಾವರದ ಬಾಲ ಕಲಾವಿದರಿಂದ ವಿದ್ಯುನ್ಮತಿ ಕಲ್ಯಾಣ ಬಯಲಾಟ ಜರಗಲಿದೆ ಎಂದು ಯಕ್ಷದೇಗುಲ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.