ಅಜೆಕಾರು: ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.
ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಹಸಲ್’ಜಡ್ಡು ಎಂಬಲ್ಲಿ ಪ್ರಮೀಳಾ (24) ಎಂಬ ಯುವತಿ ಫೆ. 24 ರಂದು ಶನಿವಾರ ಮನೆಯಿಂದ ಮುನಿಯಾಲು ಕಾಮಾಕ್ಷಿ ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ.
ನಾಪತ್ತೆಯಾಗಿದ್ದ ಮುನ್ನಾ ದಿನ ಶುಕ್ರವಾರವೇ ವಾರದ ಸಂಬಳವನ್ನು ಪಡೆದುಕೊಂಡು,ತನ್ನ ಬ್ಯಾಂಕ್ ಖಾತೆಯಲ್ಲಿನ ರೂ. 10 ಸಾವಿರವನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈಕೆ ನಾಪತ್ತೆಯಾಗುವ ಮುನ್ನ ತನ್ನ ಮೊಬೈಲ್ ನಲ್ಲಿದ್ದ ಕರೆಗಳು ಹಾಗೂ ವಾಟ್ಸಾಪ್ ಚಾಟಿಂಗ್ ಡಿಲೀಟ್ ಮಾಡಿದ್ದಾಳೆ ಎನ್ನಲಾಗಿದ್ದು, ನಾಪತ್ತೆಯಾಗಿರುವ ಕಾರಣ ತಿಳಿದುಬಂದಿಲ್ಲವಾದರೂ, ಮೂಲಗಳ ಪ್ರಕಾರ ಈಕೆ ಪ್ರಿಯಕರನ ಜತೆ ಹೋಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಈಕೆಯ ಕಾಲ್ ಡೀಟೇಲ್ಸ್ ಮಾಹಿತಿ ಕಲೆ ಹಾಕುತ್ತಿದ್ದು, ಅತೀ ಹೆಚ್ಚು ಕರೆ ಹೋಗಿರುವ ನಂಬರಿನ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ