ಅಜೆಕಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರ್ಣೆ, ಮಂಜುಶ್ರೀ ಸ್ಪೋರ್ಟ್ಸ್ ಕ್ಲಬ್ ದೆಪ್ಪುತ್ತೆ ಅಜೆಕಾರು ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 18ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ನಂದಕುಮಾರ್ ಹೆಗ್ಡೆ ಅಜೆಕಾರು, ನಂದಾದೀಪ ಆಟೋಮೊಬೈಲ್ ನ ಅರುಣ್ ಶೆಟ್ಟಿಗಾರ್ ಅಜೆಕಾರು, ಅಜೆಕಾರು ಸಿ.ಎ. ಬ್ಯಾಂಕ್ ನಿರ್ದೇಶಕರಾದ ಶ್ರೀಮತಿ ವಿದ್ಯಾ ಪೈ, ಮರ್ಣೆ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ವಿಜಯ ಕಾಮತ್, ಮರ್ಣೆ ಗ್ರಾ.ಪಂ ಸದಸ್ಯರಾದ ಶ್ರೀಮತಿ ಚರಿತ್ರಾ, ಜಾನ್ ಟೆಲ್ಲಿಸ್, ಉದ್ಯಮಿ ಸಂತೋಷ್,ವಿಹಿಂಪ ಮುಖಂಡರಾದ ಶ್ರೀಧರ್ ಶೆಟ್ಟಿ, ಶ್ರೀ ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷರಾದ ತೌಡ, ಸೇವಾ ಪ್ರತಿನಿಧಿ ಶ್ರೀಮತಿ ಹೇಮಾ ಉಪಸ್ಥಿತರಿದ್ದರು.
ಮರ್ಣೆ ಗ್ರಾ.ಪಂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಯಶೋಧಾ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಲಿಕೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ,ಪೂಜಾ ಸುಕುಮಾರ್, ಸಿಂಧು ,ಕಾವ್ಯ ಇವರನ್ನು ಸನ್ಮಾನಿಸಲಾಯಿತು.
ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳೊಂದಿಗೆ ವಿವಿಧ ಆಟೋಟಗಳನ್ನು ನಡೆಸಲಾಯಿತು.