Share this news

 

 

 

 

ಕಾರ್ಕಳ: ಉಡುಪಿ ಜಿಲ್ಲಾ ಪಂಚಾಯತ್ ಕಾರ್ಕಳ ತಾಲೂಕು ಪಂಚಾಯತ್  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಗ್ರಾಮೀಣಾಭಿವೃದ್ಧಿಯ ಹೊಸ ಹಾದಿ-ಯುಕ್ತಧಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ 2026-27ನೇ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು “ಯುಕ್ತಧಾರ” ತಂತ್ರಾಂಶವನ್ನು ಜಾರಿಗೊಳಿಸಿದೆ. ಇದರ ಅನುಸಾರ “ಗ್ರಾಮಾಭಿವೃದ್ಧಿಯ ಹೊಸ ಹಾದಿ – ಯುಕ್ತಧಾರ” ಮಾರ್ಗಸೂಚಿಸನುಸಾರ ಕಾರ್ಮಿಕ ಆಯವ್ಯಯವನ್ನು ಸಿದ್ಧಪಡಿಸಲು ಉದ್ಯೋಗ ಚೀಟಿ ಹೊಂದಿರುವ ಫಲಾನುಭವಿಗಳು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ನವೆಂಬರ್ 30 ರೊಳಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಿಗೆ ಬ ಅರ್ಜಿ ಸಲ್ಲಿಸಬಹುದು.

ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ನೂರು ದಿನಗಳ ಕೆಲಸದ ಖಾತರಿಯ ಜೊತೆಗೆ ದಿನವೊಂದಕ್ಕೆ 370 ರೂ. ಕೂಲಿ ಮೊತ್ತ ನೀಡಲಾಗುತ್ತದೆ.
ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳ ವಿವರ: ಕೃಷಿ ನೀರಾವರಿ ಬಾವಿ – ಅಂದಾಜು ಮೊತ್ತ 1,50,000, ಕೃಷಿ ಹೊಂಡ ವಿಧಾನ 1 – ಅಂದಾಜು ಮೊತ್ತ 52,000, ಕೃಷಿ ಹೊಂಡ ವಿಧಾನ 2 – ಅಂದಾಜು ಮೊತ್ತ 63,000, ಕೃಷಿ ಹೊಂಡ ವಿಧಾನ 3 – ಅಂದಾಜು ಮೊತ್ತ 92,000, ಕೃಷಿ ಹೊಂಡ ವಿಧಾನ 4 – ಅಂದಾಜು ಮೊತ್ತ 1,49,000, ಬಚ್ಚಲು ಗುಂಡಿ – ಅಂದಾಜು ಮೊತ್ತ 11,000, ಕೋಳಿ ಸಾಕಾಣಿಕೆ ಶೆಡ್ – ಅಂದಾಜು ಮೊತ್ತ 70,000, ದನದ ಹಟ್ಟಿ – ಅಂದಾಜು ಮೊತ್ತ 57,000, ಎರೆಹುಳು ತೊಟ್ಟಿ ಘಟಕ – ಅಂದಾಜು ಮೊತ್ತ 20,000, ಗೊಬ್ಬರಗುಂಡಿ – ಅಂದಾಜು ಮೊತ್ತ 25,000, ಹಂದಿ ಶೆಡ್ – ಅಂದಾಜು ಮೊತ್ತ 57,000, ಕುರಿ/ಮೇಕೆ ಶೆಡ್ – ಅಂದಾಜು ಮೊತ್ತ 70,000, ಕೊಳವೆ ಬಾವಿ ಜಲ ಮರುಪೂರಣ ಘಟಕ – ಅಂದಾಜು ಮೊತ್ತ 45,000, ಪೌಷ್ಠಿಕ ಕೈ ತೋಟ – ಅಂದಾಜು ಮೊತ್ತ 4,503, ಜೈವಿಕ ಅನಿಲ / ಗೊಬರ್‌ ಗ್ಯಾಸ್‌ – ಅಂದಾಜು ಮೊತ್ತ 25,000, ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 90 ಮಾನವ ದಿನ – ಅಂದಾಜು ಮೊತ್ತ 33,300, ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಅನುಷ್ಠಾನಗೊಳಿಸಬಹುದಾದ ಕಾಮಗಾರಿಗಳ ವಿವರ:- ಹೊಸ ಅಡಿಕೆ ತೋಟ, ತೆಂಗಿನ ತೋಟ, ಗೇರು ತೋಟ, ಅಂಗಾಂಶ ಬಾಳೆ, ಅಡಿಕೆಯಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆ, ತೆಂಗಿನಲ್ಲಿ ಕಾಳುಮೆಣಸು ಪ್ರದೇಶ ವಿಸ್ತರಣೆ, ನುಗ್ಗೆ ಪ್ರದೇಶ ವಿಸ್ತರಣೆ, ಕೋಕೋ ಪ್ರದೇಶ ವಿಸ್ತರಣೆ, ತಾಳೆ ಬೆಳೆ , ವೀಳ್ಯೆದೆಲೆ, ಹಲಸು ಪ್ರದೇಶ ವಿಸ್ತರಣೆ, ಜಾಯಿಕಾಯಿ ಪ್ರದೇಶ ವಿಸ್ತರಣೆ, ರಾಂಬೂತಾನ್ ಪ್ರದೇಶ ವಿಸ್ತರಣೆ, ಡ್ರ್ಯಾಗನ್ ಪ್ರೂಟ್ ಪ್ರದೇಶ ವಿಸ್ತರಣೆ, ಉಡುಪಿ ಮಲ್ಲಿಗೆ ಕೃಷಿಯನ್ನು ಕನಿಷ್ಠ 5 ಸೆಂಟ್ಸ್ ಪ್ರದೇಶದಲ್ಲಿ ಮಲ್ಲಿಗೆ ಬೆಳೆ ಬೆಳೆಸಬಹುದು.

ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯಡಿ ಅನುಷ್ಠಾನಗೊಳಿಸಬಹುದಾದ ಸಮುದಾಯ ಕಾಮಗಾರಿಗಳ ವಿವರ :- ರಸ್ತೆ ಬದಿ ನೆಡುತೋಪು ಬೆಳೆಸುವುದು, 1 ನೇ ವರ್ಷದ ಪೋಷಣೆ ರಸ್ತೆಬದಿ ನೆಡುತೋಪು , 2 ನೇ ವರ್ಷದ ಪೋಷಣೆ ರಸ್ತೆಬದಿ ನೆಡುತೋಪು, 3 ನೇ ವರ್ಷದ ಪೋಷಣೆ ರಸ್ತೆಬದಿ ನೆಡುತೋಪು, ಸರ್ಕಾರಿ ಶಾಲೆ/ಸಂಘ ಸಂಸ್ಥೆಗಳ ಸರಕಾರಿ ಸ್ಥಳದಲ್ಲಿ ನೆಡುತೋಪು ರಚನೆ ಸರ್ಕಾರಿ ಶಾಲೆ/ಸಂಘ ಸಂಸ್ಥೆಗಳ ಸರಕಾರಿ ಸ್ಥಳದಲ್ಲಿ ನೆಡುತೋಪುವಿನ 1 ನೇ ವರ್ಷದ ಪೋಷಣೆ, ಸರ್ಕಾರಿ ಶಾಲೆ/ಸಂಘ ಸಂಸ್ಥೆಗಳ ಸರಕಾರಿ ಸ್ಥಳದಲ್ಲಿ ನೆಡುತೋಪುವಿನ 2 ನೇ ವರ್ಷದ ಪೋಷಣೆ, ಸರ್ಕಾರಿ ಶಾಲೆ/ಸಂಘ ಸಂಸ್ಥೆಗಳ ಸರಕಾರಿ ಸ್ಥಳದಲ್ಲಿ ನೆಡುತೋಪುವಿನ 3 ನೇ ವರ್ಷದ ಪೋಷಣೆ, ನರೇಗಾ ಯೋಜನೆಯಡಿ ಕೃಷಿ ಇಲಾಖೆಯಡಿ ಅನುಷ್ಠಾನಗೊಳಿಸಬಹುದಾದ ಕಾಮಗಾರಿಗಳ ವಿವರ :-ಕೃಷಿ ನೀರಾವರಿ ಬಾವಿ ರಚನೆ, ಟ್ರೆಂಚಸ್ ರಚನೆ, ಎರೆಹುಳು ತೊಟ್ಟಿ, ಅಡಿಕೆ ತೋಟ ರಚನೆ
ನರೇಗಾ ಯೋಜನೆಯಡಿ ನಿಮ್ಮದೇ ಗ್ರಾಮದಲ್ಲಿ ಕೈಗೊಳ್ಳಬಹುದಾದ ಸಮುದಾಯ ಕಾಮಗಾರಿಗಳ ವಿವರ:- ಸಮಗ್ರ ಕೆರೆ ಅಭಿವೃದ್ಧಿ, ಕಲ್ಯಾಣಿ ರಚನೆ, ಕಾಲುವೆ/ತೋಡು ಹೂಳೆತ್ತುವಿಕೆ, ಸಿ.ಸಿ.ರೋಡ್, ಶಾಲಾ ಆವರಣ ಗೋಡೆ ರಚನೆ, ಶಾಲಾ ಶೌಚಾಲಯ, ಶಾಲಾ ಅಡುಗೆ ಕೋಣೆ, ಸಂಜೀವಿನಿ ಶೆಡ್, ಗೋಕಟ್ಟೆ, ಆಟದ ಮೈದಾನ, ಅಂಗನವಾಡಿ ಕಟ್ಟಡ ನಿರ್ಮಾಣ, ಸಮುದಾಯ ಬಚ್ಚಲು ಗುಂಡಿ, ಸಶ್ಮಾನ ಅಭಿವೃದ್ಧಿ, ಕೊಳವೆ ಬಾವಿ ಜಲಮರುಪೂರಣ ಘಟಕ, ಸರ್ಕಾರಿ ಶಾಲೆ/ಕಟ್ಟಡಗಳಿಗೆ ಮಳೆನೀರು ಕೊಯ್ಲು, ಇಂಗು ಗುಂಡಿ, ಗ್ರಾಮೀಣ ಗೋದಾಮು, ಕಿಂಡಿ ಅಣೆಕಟ್ಟು, ಕಾಲು ಸಂಕ, ಚರಂಡಿ ರಚನೆ, ಗೋಶಾಲೆ, ಮೀನು ಕೃಷಿ ಹೊಂಡ, ಗ್ರಾಮೀಣ ಸಂತೆ, ಸಮುದಾಯ ಕೃಷಿ ನೀರಾವರಿ ಬಾವಿ.

ಅರ್ಹ ಕುಟುಂಬಗಳು:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಪಂಗಡಗಳು, ಪ್ರಕಟಣೆಯಿಂದ ತೆಗದು ಹಾಕಿದ ಬುಡಕಟ್ಟು ಜನಾಂಗದವರು, ಬಡತನ ರೇಖೆ ಕೆಳಮಟ್ಟ ಇರುವ ಇತರೆ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು,ವಿಕಲಚೇತನ ಪ್ರಧಾನ ಕುಟುಂಬಗಳು,ಭೂ ಸುಧಾರಣಾ ಕುಟುಂಬಗಳು,ಪ್ರಧಾನ ಮಂತ್ರಿ ಅವಾಜ್ ಯೋಜನೆಯ ಫಲಾನುಭವಿಗಳು,ಸಣ್ಣ ರೈತ ಅಥವಾ ಅತೀ ಸಣ್ಣ ರೈತ ಪ್ರಮಾಣ ಪತ್ರ, ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು,ಉದ್ಯೋಗ ಚೀಟಿ ಪ್ರತಿ (ಜಾಬ್‌ ಕಾರ್ಡ್‌),ಬಿ.ಪಿ.ಎಲ್ ಕಾರ್ಡ್ ಪ್ರತಿ / ಸಣ್ಣ ರೈತ ಅಥವಾ ಅತೀ ಸಣ್ಣ ರೈತ ಪ್ರಮಾಣ ಪತ್ರ,ಪ.ಜಾತಿ/ಪ.ಪಂಗಡ ಜಾತಿ ಪ್ರಮಾಣ ಪ್ರತಿ
ಆರ್.ಟಿ.ಸಿ. ಪ್ರತಿ,ಉದ್ಯೋಗ ಚೀಟಿಯಲ್ಲಿ ನೋಂದಣಿಯಾಗಿರುವ ಸದಸ್ಯರ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಪ್ರತಿ

ಸೂಚನೆ:
ಒಂದು ಕುಟುಂಬವು ಜೀವಿತಾವಧಿಯಲ್ಲಿ ರೂ. 5 ಲಕ್ಷಗಳ ಮಿತಿಯೊಳಗೆ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯಬಹುದು.
ಉದ್ಯೋಗ ಖಾತರಿ ನೋಂದಣಿ ಮಾಡುವ ಸದಸ್ಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ಜೋಡಣೆ ಆಗಿರಬೇಕು.
ಯೋಜನೆಯಡಿ ಕೂಲಿ ಮತ್ತು ಸಾಮಾಗ್ರಿ ಮೊತ್ತ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವ ಕಾರಣ ಕಡ್ಡಾಯವಾಗಿ ಉದ್ಯೋಗ ಚೀಟಿ ಹೊಂದಿದ ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಎನ್.ಪಿ.ಸಿ.ಐ ಮ್ಯಾಪಿಂಗ್ ಆಗಿರಬೇಕು. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಪ್ರಾರಂಭವಾಗುವ ಮುನ್ನ ಕಡ್ಡಾಯವಾಗಿ ನರೇಗಾ ಮಾಹಿತಿ ಫಲಕ ಅಳವಡಿಸಬೇಕು. ಕಾಮಗಾರಿಗಳಿಗೆ ಜೆ.ಸಿ.ಬಿ. ಹಾಗೂ ಯಂತ್ರಗಳ ಬಳಕೆಗೆ ಅವಕಾಶವಿರುವುದಿಲ್ಲ. ತಾವು ಸಲ್ಲಿಸದ ಬೇಡಿಕೆ (ಅರ್ಜಿ) ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡು, ನಿಗದಿತ ಕಾರ್ಮಿಕ ಆಯವ್ಯಯದ ಮಿತಿಗೆ ಒಳಪಟ್ಟಿರುತ್ತದೆ.
ಕ್ರಿಯಾ ಯೋಜನೆ ಅನುಮೋದನೆಯಾದ ಬಳಿಕ (ಅಂದರೆ ಎಪ್ರಿಲ್‌ 2026 ನಂತರ)ಕಾಮಗಾರಿ ಪ್ರಾರಂಭಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಲು ಅವಕಾಶವಿರುವುದಿಲ್ಲ. ಸಮುದಾಯ ಕಾಮಗಾರಿ ಸಂದರ್ಭದಲ್ಲಿ ಪ್ರತೀ ದಿನ ಕೂಲಿಕಾರರ ಹಾಜರಾತಿಯನ್ನು ಎನ್.ಎಮ್.ಎಮ್.ಎಸ್. ಆಪ್ ಮೂಲಕ ಪಡೆದುಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತ್ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 8277506000 ಸಂಪರ್ಕಿಸುವಂತೆ ಕಾರ್ಕಳ ತಾಲೂಕು ಪಂಚಾಯತ್ ಪ್ರಕಟಣೆ ತಿಳಿಸಿದೆ.

    

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *