ಕಾರ್ಕಳ: ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟ ಇವರ ಆಶ್ರಯದಲ್ಲಿ ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಹಾಗೂ ಜಿಲ್ಲಾ ಮಲೆಕುಡಿಯ ಸಂಘ (ರಿ.).ಇದರ ಸಹಯೋಗದೊಂದಿಗೆ, ಜೇನು ಕುರುಬ, ಬೆಟ್ಟಕುರುಬ,ಯರವ,ಸೋಲಿಗ,ಕೊರಗಹಸಲರು,ಗೊಂಡ,ಮಲೆಕುಡಿಯ,ಗೌಡ್ಲು,ಸಿದ್ದಿ,ಹಕ್ಕಿಪಿಕ್ಕಿ,ಡೋಂಗ್ರೀ-ಗರಾಸಿಯಾ, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ಕಾರ್ಯಾಗಾರ ಮತ್ತು ಸಾಮಾನ್ಯ ಸಭೆಯು ಅಗಸ್ಟ್ 05 ಮತ್ತು 06 ರಂದು ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ, ಕಾರ್ಕಳ ತಾಲೂಕಿನ ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.