ಹೆಬ್ರಿ:ನಾಡ್ಪಾಲು ಗ್ರಾಮದ ಸೋಮೇಶ್ವರ ಸಮೀಪದ ಆಗುಂಬೆ ಘಾಟಿಯ
7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಆಳದ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಶಿವಮೊಗ್ಗ ನಿವಾಸಿ ಗುಜರಿ ವ್ಯಾಪಾರಿ ಮಹಮ್ಮದ್ ಪಾಷಾ ಎಂಬವರು ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ರಾಪ್ ವಾಹನವನ್ನು ಟ್ರ್ಯಾಕ್ಟರ್ ಮೂಲಕ ಟೋಯಿಂಗ್ ಮಾಡುತಿದ್ದ ವೇಳೆ ಟ್ರಾಕ್ಟರ್ ಹಿಮ್ಮುಖ ಚಲಿಸಿದ ಪರಿಣಾಮ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ಅವರು ಆಳವಾದ ಪ್ರಪಾತಕ್ಕೆ ಬಿದ್ದಿದ್ದಾರೆ. ಆಗುಂಬೆ ಘಾಟ್ ನಿಂದ ಸುಮಾರು 25 ರಿಂದ 30 ಅಡಿ ಬಳಕೆ ಬಿದ್ದ ಭಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಭಾಷ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿದ್ದಲಿದ್ದ ಹಿಂದೂ ಜಾಗರಣೆ ವೇದಿಕೆಯ ಸದಸ್ಯರು ಅಪಾಯವನ್ನು ಲೆಕ್ಕಿಸದೇ ಗಂಭೀರವಾಗಿ ಗಾಯಗೊಂಡು ಮಹಮ್ಮದ್ ಪಾಷಾರನ್ನು ಹಗ್ಗದ ಮೂಲಕ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.
ಹಿಂದೂ ಜಾಗರಣೆ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಮಹಮ್ಮದ್ ಪಾಷಾರನ್ನ ಬೆಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ.ಗಂಭೀರ ಸ್ಥಿತಿಯಲ್ಲಿರುವ ಮಹಮ್ಮದ್ ಪಾಷಾರನ್ನು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಿಂದೂ ಜಾಗರಣೆ ವೇದಿಕೆಯ ನಿತ್ಯಾನಂದ ಮತ್ತು ತಂಡದ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.