Share this news

ಕಾರ್ಕಳ, ಏ,15: ಸೈಕಲ್ ಸರ್ಕಸ್ ನವರೊಂದಿಗೆ ಡಾನ್ಸ್ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಅವರ ಸ್ನೇಹಿತರೇ ಹಲ್ಲೆ ನಡೆಸಿದ್ದು, ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಕ್ಕುಂದೂರು ನಿವಾಸಿ ವಿಜಯ ಕುಮಾರ್ (40) ಎಂಬವರು ಏ.12 ರಂದು ದುರ್ಗಾನಗರದಲ್ಲಿ ಸೈಕಲ್ ಸರ್ಕಸ್ ನಡೆಯುತ್ತಿದ್ದಲ್ಲಿ ಹೋಗಿ ಅವರೊಂದಿಗೆ ಡಾನ್ಸ್‌ ಮಾಡಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಸ್ನೇಹಿತರಾದ ಗುರುಪ್ರಸಾದ್, ಶಿವ ಮತ್ತು ದಯಾನಂದ ಎಂಬವರು ವಿಜಯ ಕುಮಾರ್ ರನ್ನು ಅಡ್ಡಗಟ್ಟಿ ಸೈಕಲ್ ಸರ್ಕಸ್ ನವರೊಂದಿಗೆ ಡ್ಯಾನ್ಸ್ ಮಾಡಿ ಊರಿನ ಮರ್ಯಾದೆ ತೆಗೆಯುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಲೆಗೆ ಕಾಂಕ್ರೀಟ್ ತಾಗಿ ಗಾಯಗೊಂಡಿದ್ದ ಅವರನ್ನು ವಿಜಯ ಎಂಬವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಏ.14 ರಂದು ಮತ್ತೆ ನೋವು ಉಲ್ಬಣಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *