
ಹೆಬ್ರಿ ಏ.16: ಹೆಬ್ರಿಯಲ್ಲಿ ಸ್ಥಾಪನೆಗೊಂಡಿದ್ದ ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ 2026-2027 ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಹೆಬ್ರಿ ಸಮಾಜ ಮಂದಿರದಲ್ಲಿ ಎ. 14 ರಂದು ನಡೆಯಿತು.
ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿದ ಅಲಯನ್ಸ್ ಜಿಲ್ಲೆ 275 ಎಸ್ ಇದರ ಪ್ರಥಮ ಉಪ ಜಿಲ್ಲಾ ಗವರ್ನರ್ ಕೆ. ಸುಧಾಕರ ಹೆಗ್ಡೆ ಯವರು ಪದ ಪ್ರಧಾನ ಕಾರ್ಯಕ್ರಮ ನೆರವೇರಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್ ರವರು ಕಾರ್ಯದರ್ಶಿಯಾಗಿದ್ದ ಬಾಲಚಂದ್ರ. ಎಂ ರವರಿಗೆ ಅಧ್ಯಕ್ಷ ಸ್ಥಾನ ಅಧಿಕಾರ ಹಸ್ತಾಂತರಿಸಿದರು.
ಬಾಲಚಂದ್ರ. ಎಂ ರವರು ಸದಸ್ಯರಾಗಿದ್ದ ಸುರೇಶ್ ನಾಯ್ಕ್ ರವರಿಗೆ ಕಾರ್ಯದರ್ಶಿ ಸ್ಥಾನ ಅಧಿಕಾರ ಹಸ್ತಾಂತರಿಸಿದರು.
ಹಿಂದಿನ ವರ್ಷದ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅದೇ ಪದಾಧಿಕಾರಿಗಳು , 2026-2027 ಕ್ಕೆ ಮುಂದುವರಿದು ಪ್ರಮಾಣ ವಚನ ಮಾಡಿದರು. ಲೇಡೀಸ್ ಅಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಮ್ಯಕಾಂತಿ ಯವರು 96 ದಿವಸಗಳಲ್ಲಿ ಕ್ಲಬ್ ಗಳು ಜಂಟಿಯಾಗಿ ನಿರ್ವಹಿಸಿದ ಸುಮಾರು 50 ಕ್ಕೂ ಮಿಕ್ಕಿ ಮಾಡಿದ ಸೇವಾಚಟುವಟಿಕೆಗಳ ವರದಿ ಮಂಡಿಸಿದರು. ಕೋಶಾಧಿಕಾರಿ ಸುರೇಶ ಪೂಜಾರಿ ಸಹಕರಿಸಿದರು, ಚಂದ್ರಶೇಖರ ಭಟ್ ಪದಗ್ರಹಣ ಅಧಿಕಾರಿಯ ಪರಿಚಯ ಮಾಡಿದರು. ನೂತನ ಅಧ್ಯಕ್ಷರಾದ ಬಾಲಚಂದ್ರ. ಎಂ ರವರು ಅಧಿಕಾರ ಸ್ವೀಕಾರ ಬಗ್ಗೆ ಮಾತನಾಡಿದರು. ನಿರ್ಗಮಿತ ಅಧ್ಯಕ್ಷರು ಮಾತನಾಡಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸಿದರು.
ಜಿಲ್ಲಾ ಸಂಪುಟದ ದ್ವಿತೀಯ ಉಪ ಜಿಲ್ಲಾ ಗವರ್ನರ್ ಡಾ. ಅಶೋಕ್ ಕುಮಾರ್ ವೈ. ಜಿ, ಜಿಲ್ಲಾ ಸಂಪುಟದ ಜಯರಾಮ ಆಚಾರ್ಯ, ಹಾಗೂ ಹೆಬ್ರಿ ಲೇಡೀಸ್ ಅಲಯನ್ಸ್ ಕ್ಲಬ್ಬಿ ನ ಮುಖ್ಯ ಸಲಹೆಗಾರರಾದ ಡಾ. ಭಾರ್ಗವಿ ಐತಾಳ್ ರವರು, ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್ ಮಾತನಾಡಿ ಶುಭಾಶಯ ಹೇಳಿದರು.
ಪದಪ್ರಧಾನ ಅಧಿಕಾರಿ ಕೆ.ಸುಧಾಕರ ಹೆಗ್ಡೆ ಮತ್ತು ನಿರ್ಗಮನ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್ ರವರನ್ನು ಕ್ಲಬ್ ಗಳ ಪರವಾಗಿ ಸನ್ಮಾನಿಸಲಾಯಿತು.
ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷರಾದ ಸುನೀತ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ಮೆಂಬರ್ಶಿಪ್ ಚೈರ್ ಪರ್ಸನ್ ಮಹೇಶ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ ನಾಯ್ಕ್ ವಂದಿಸಿದರು.

















.
.
.
.
.
.
.
.
.
.
