ಉಡುಪಿ : ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಯವರಿಗೆ ನಿಕಟಪೂರ್ವ ಅಧ್ಯಕ್ಷರಾದ ನವೀನ್ ಅಮೀನ್ ರವರು ದಾಖಲಾತಿ ನೀಡುವುದರ ಮಾಡುವುದರ ಮೂಲಕ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಸ್ಥಾಪಕ ಅಧ್ಯಕ್ಷರಾದ ಅಪ್ಪಣ್ಣ ಹೆಗ್ಡೆ, ಉಡುಪಿ ಕುಂದಾಪುರ ಬೈಂದೂರು ಕಾರ್ಕಳ ಹೆಬ್ರಿ ಮೂಡಬಿದ್ರೆ ತಾಲೂಕುಗಳ ತಾಲೂಕು ಅಧ್ಯಕ್ಷರುಗಳು, ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಯ ಪ್ರಭು, ಜಿಲ್ಲೆಗೆ ಸಂಬAಧಪಟ್ಟ ಎಲ್ಲಾ ತಾಲೂಕಿನ ಯೋಜನಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ವೇದಿಕೆಯ ಎಲ್ಲ ಸದಸ್ಯರುಗಳು, ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು, ಎಂಐಎಸ್ ಯೋಜನಾಧಿಕಾರಿಗಳು, ಜಿಲ್ಲಾ ಪ್ರಬಂಧಕರು ಕಾರ್ಯಕರ್ತರು ಉಪಸಿತರಿದ್ದರು.