ಉಡುಪಿ: ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಕಾಜರಗುತ್ತು ನಿವಾಸಿ ಕೃಷ್ಣ ಪೂಜಾರಿ (60) ಎಂಬವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸ್ಕೂಟರ್ ಸವಾರ ಕೃಷ್ಣ ಪೂಜಾರಿ ಹಾಗೂ ಸಹಸವಾರ ಎಂಬವರು ಶನಿವಾರ ಬೆಳಗ್ಗೆ ಹಿರಿಯಡ್ಕದಿಂದ ಉಡುಪಿ ಕಡೆ ಹೋಗುತ್ತಿದ್ದಾಗ ಓಂತಿಬೆಟ್ಟು ಎಂಬಲ್ಲಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಸಾಚಿ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಅಪಘಾತದ ತೀವ್ರತೆಗೆ ಕೃಷ್ಣ ಪೂಜಾರಿ ಸ್ಥಳದಲ್ಲಿ ಮೃತಪಟ್ಟರೆ ಸಹಸವಾರ ನಿವೃತ್ತ ಬ್ಯಾಂಕ್ ಉದ್ಯೋಗಿ ಹಿರಿಯಡ್ಕದ ನಿವಾಸಿ ಭೋಜ ಶೆಟ್ಟಿ ಗಂಭೀರ ಗಾಯಗೊಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.