ಕಾರ್ಕಳ: ವಿವಾಹಿತ ಮಹಿಳೆಯೊಬ್ಬರು ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದ್ದು ಮಹಿಳೆಯ ಆತ್ಮಹತ್ಯೆಗೆ ಆಕೆಯ ದೂರದ ಸಂಬAಧಿಕನಾದ ಈದು ಗ್ರಾಮದ ಹೊಸ್ಮಾರಿನ ಸಂತೋಷ ಯಾನೆ ಹರಿತನಯ ದೇವಾಡಿಗನ ಕಿರುಕುಳವೇ ಕಾರಣವೆಂದು ಮೃತ ಪ್ರಮೀಳಾ ಸಹೋದರ ಪ್ರದೀಪ್ ದೇವಾಡಿಗ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಸಂತೋಷ್ ದೇವಾಡಿಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕಾರ್ಕಳದ ಮಾರ್ಕೇಟ್ ರಸ್ತೆ ನಿವಾಸಿ ಪ್ರಮೀಳಾ ದೇವಾಡಿಗ ಎಂಬವರು ಕಾರ್ಕಳ ಮಾಧವಕೃಪಾ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿನ ಕಾರ್ಕಳ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಹಾಯಕಿಯಾಗಿ ಕೆಲಸ ರ್ನಿಹಿಸುತ್ತಿದ್ದರು. ಈಕೆಗೆ ಕಳೆದ 2016ರಲ್ಲಿ ನರೇಶ್ ದೇವಾಡಿಗ ಎಂಬವರ ಜತೆ ವಿವಾಹವಾಗಿತ್ತು.ಕಳೆದ ಕೆಲ ಸಮಯದಿಂದ ಪ್ರಮೀಳಾ ತನ್ನ ಮಗುವಿನ ಜತೆ ತವರು ಮನೆಯಲ್ಲಿ ವಾಸವಾಗಿದ್ದು, ತಾಯಿ ಮನೆಯಿಂದಲೇ ಕಚೇರಿ ಕೆಲಸಕ್ಕೆ ಹೋಗುತ್ತಿದ್ದರು.ಆದರೆ ಕಳೆದ ಜುಲೈ 14ರಂದು ಬೆಳಗ್ಗೆ ಕಚೇರಿಯಲ್ಲೇ ಪ್ರಮೀಳಾ ದೇವಾಡಿಗ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಘಟನೆಯಿಂದ ಆಕೆಯ ಮನೆಯವರು ಹಾಗೂ ಕಚೇರಿಯ ಆಡಳಿತ ಮಂಡಳಿ ಸದಸ್ಯರು ಬೆಚ್ಚಿಬಿದ್ದಿದ್ದರು.
ಇತ್ತ ಪ್ರಮೀಳಾ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿದ್ದವು,ಕೌಟುAಬಿಕ ಕಲಹ ಕಾರಣ ಎನ್ನುವ ವಿಚಾರಗಳೂ ಕೂಡ ಚರ್ಚೆಗೆ ಗ್ರಾಸವಾಗಿತ್ತು.ಆದರೆ ಆಕೆ ಆತ್ಮಹತ್ಯೆಯ ಬಳಿಕ ಈಕೆಯ ಸಾವಿಗೆ ಕಾರಣವಾದ ಅಂಶಗಳು ಆಕೆಯ ಗೆಳತಿಯಿಂದ ಬಹಿರಂಗವಾಗಿದ್ದು ಈ ಆಧಾರದಲ್ಲಿ ಪೊಲೀಸರು ತನಿಖೆಗೆ ಮುಂದಾಗಿದ್ದು ಆಕೆಯ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ ಸಂತೋಷ್ ದೇವಾಡಿಗ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಪ್ರಮೀಳಾ ಪತಿ ನರೇಶ್ ಅವರ ದೂರದ ಸಂಬAಧಿಕ ಸಂತೋಷ್ ದೇವಾಡಿಗ ಹಾಗೂ ಪ್ರಮೀಳಾ ನಡುವೆ ಪರಿಚಯವಾಗಿ ಸ್ನೇಹವಿದ್ದ ಕಾರಣದಿಂದ ಇವರಿಬ್ಬರ ನಡುವೆ ಆತ್ಮೀಯತೆ ಇತ್ತೆನ್ನಲಾಗಿದೆ.
ಈಕೆಯ ಜತೆ ಸ್ನೇಹ ಸಂಪಾದಿಸಿಕೊAಡ ಆರೋಪಿ ಸಂತೋಷ್ ಯಾನೆ ಹರಿತನಯ ದೇವಾಡಿಗ ಪ್ರಮೀಳಾ ಜತೆ ಹಣಕಾಸಿನ ವ್ಯವಹಾರ ನಡೆಸಿದ್ದ. ಕಳೆದ 4 ತಿಂಗಳಿನಿAದ ತನಗೆ 3 ಲಕ್ಷ ಹಣ ನೀಡುವಂತೆ ಪೀಡಿಸುತ್ತಿದ್ದ ಎನ್ನುವ ವಿಚಾರ ಮೃತ ಪ್ರಮೀಳಾ ತನ್ನ ಗೆಳತಿಯ ಜತೆ ಹೇಳಿಕೊಂಡಿದ್ದರು. ಹಣ ನೀಡದೇ ಇದ್ದಾಗ ಆಕೆಗೆ ಬೆದರಿಕೆ ಒಡ್ಡುತ್ತಿದ್ದ ಹಾಗೂ ಈಕೆಗೆ ಪೀಡಿಸುವ ವಿಚಾರ ಬೇರೆ ಯಾರಿಗೂ ತಿಳಿಸದಂತೆ ಪ್ರಮೀಳಾ ಗೆಳತಿಗೂ ತಾಕೀತು ಮಾಡಿದ್ದ ಮಾತ್ರವಲ್ಲದೇ ಪ್ರಮೀಳಾ ಮರ್ಯಾದೆಗೆ ಅಂಜಿ ತನಗೆ ಸಂತೋಷ್ ದೇವಾಡಿಗ ಬೆದರಿಸುತ್ತಿದ್ದ ವಿಚಾರ ಪತಿ ಹಾಗೂ ಆಕೆಯ ಕುಟುಂಬ ಸದಸ್ಯರ ಬಳಿ ಪ್ರಸ್ತಾಪಿಸದಂತೆ ತನ್ನ ಗೆಳತಿಯ ಮಕ್ಕಳ ಮೇಲೆ ಪ್ರಮಾಣ ಮಾಡಿಸಿದ್ದರು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ಸಂತೋಷ್ ಯಾನೆ ಹರಿತನಯ ದೇವಾಡಿಗನನ್ನು ವಿಚಾರಣೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದ್ದು ತನಿಖೆಯ ಕುರಿತು ಮಾಧ್ಯ,ಗಳಿಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಪತಿ ಮಕ್ಕಳ ಜತೆ ನೆಮ್ಮದಿಯ ಸಂಸಾರ ನಡೆಸಬೇಕಿದ್ದ ಮಹಿಳೆಯ ಬಾಳಿನಲ್ಲಿ ಸ್ನೇಹದ ಸೋಗಿನಲ್ಲಿ ಆಕೆಯ ಬಾಳಿಗೆ ಕೊಳ್ಳಿಯಿಟ್ಟವನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ