ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ, ಮಕ್ಕಳ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಉಪನ್ಯಾಸ ಮತ್ತು ಸ್ತನ್ಯಪಾನ ಸಲಹೆ ಕರಪತ್ರವನ್ನು ಬಿಡುಗಡೆ ಕಾರ್ಯಕ್ರಮ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ. ಲೆಸ್ಲಿ ಎಡ್ವಾರ್ಡ್ ಲುವಿಸ್ ಸ್ತನ್ಯಪಾನದಿಂದಾಗುವ ಒಳಿತುಗಳು ಮತ್ತು ಇದರ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಜಾನ್ ಡೆಸಿಲ್ವ, ಕಾರ್ಯದರ್ಶಿ ಮದುಕರ್ ಹೆಗ್ಡೆ, ಅಸಿಸ್ಟೆಂಟ್ ಗವರ್ನವ್ನ್ ಶೈಲೆಂದ್ರ ರಾವ್, ಸಮುದಾಯ ಸೇವೆಯ ಡೈರೆಕ್ಟರ್ ಸುರೇಶ ನಾಯಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್ ಮತ್ತಿತರು ಉಪಸ್ಥಿತರಿದ್ದರು.