ಕಾರ್ಕಳ: ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಗ್ಯಾಸ್ಟ್ರೊ ಎಂಟಿರೋಲಜಿ ಮತ್ತು ಹೆಪಟಾಲಜಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಹೆಪಟೈಟಿಸ್ ಜಾಗೃತಿ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗಾಸ್ಟ್ರೋಎಂಟರಾಲಜಿ ವಿಭಾಗ ಮುಖ್ಯಸ್ಥರಾದ ಡಾ ಶಿರನ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಹೆಪಟೈಟಿಸ್ ಬಗ್ಗೆ ಮಾಹಿತಿ ನೀಡಿ, ಕಾಯಿಲೆ ಇಲ್ಲದವರು ಲಸಿಕೆ ಹಾಕಿಸಿ ಕಾಯಿಲೆ ಬರದಂತೆ ತಡೆಯಲು ಸಾಧ್ಯ. ಖಾಯಿಲೆ ಇದ್ದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಮಾಜಿ ರಾಜ್ಯಪಾಲ ಪಿ ಡಿ ಜಿ ಡಾ ಭರತೇಶ್ ಅವರು, ಮಾನವನ ಅಂಗದಲ್ಲಿ ಯಕೃತ್ ನ ಮಹತ್ವ ಮತ್ತು ಅದರ ಆರೋಗ್ಯದ ಕುರಿತು ಮಾತನಾಡಿದರು.
.
ಕಾರ್ಕಳ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ್ ಬಳ್ಳಾಲ್ ಮಾತನಾಡಿ, ಉಚಿತ ಹೆಪಟೈಟಿಸ್ ತಪಾಸಣಾ ಶಿಬಿರವು ಆಗಸ್ಟ್.2ರಿಂದ ಆಗಸ್ಟ್.5ರ ವರೆಗೆ ಬೆಳಿಗ್ಗೆ 9.30ರಿಂದ ಸಾಯಂಕಾಲ 4.30ರ ವರೆಗೆ ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಸುರೇಶ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು.
ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಕುಮಾರಿ ಅನುಷಾ ಪ್ರಭು ನಿರೂಪಿಸಿ, ಆಶ್ಲೋನ್ ವಂದಿಸಿದರು.