ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ನಿನ್ನೆ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಕಾರ್ಕಳ ಅನಂತಪದ್ಮನಾಭ ದೇವಸ್ಥಾನದ ಚಂದ್ರಶಾಲೆ ಕಟ್ಟಡದ ಆವರಣ ಗೋಡೆ ಕುಸಿದು ಬಿದ್ದಿದೆ.ನಿಟ್ಟೆ ಗ್ರಾಮದ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದು ಸುಮಾರು 1,50,000 ಲಕ್ಷ ನಷ್ಟ ಸಂಭವಿಸಿದೆ
ನಿಟ್ಟೆ ಗ್ರಾಮದ ಬಾಳೆಹಿತ್ಲು ಎಂಬಲ್ಲಿ ಅಮಿತಾ ಎಂಬವರ ಮನೆ ಕುಸಿದು ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದೆ. ಬೋಳ ಗ್ರಾಮದ ಕೆಂಪು ಜೋರ ಎಂಬಲ್ಲಿ ಸುಮತಿ ಪೂಜಾರಿ ಎಂಬವರ ಮನೆಯ ಗೋಡೆ ಕುಸಿದು ಬಿದ್ದು 10,000 ನಷ್ಟ ಸಂಭವಿಸಿದೆ.ಮುಂಡ್ಕೂರು ಗ್ರಾಮದ ಬೇಬಿ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ಸುಮಾರು 15000 ರೂ ನಷ್ಟವಾಗಿದೆ. ಪಳ್ಳಿ ಗ್ರಾಮದ ಒಳಂಬಳ ಎಂಬಲ್ಲಿ ಯಶೋಧರ ಎಂಬವರ ಮನೆ ಭಾರಿ ಮಳೆಗೆ ಕುಸಿದು 35,000 ನಷ್ಟವಾಗಿದೆ. ಮುಂಡ್ಕೂರು ಗ್ರಾಮದ ಬೇಬಿ ಪೂಜಾರಿ ಎಂಬವರ ಮನೆಗೆ ಮರ ಬಿದ್ದು ಸುಮಾರು 20 ಸಾವಿರ ರೂ ನಷ್ಟ ಸಂಭವಿಸಿದೆ.